Saturday, April 1, 2023

Latest Posts

ICC Ranking: ಟಿ20 ಶ್ರೇಯಾಂಕಪಟ್ಟಿಯಲ್ಲಿ ಶುಬ್ಮನ್ ಗಿಲ್ ಭಾರೀ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ಶ್ರೇಯಾಂಕಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ಭಡ್ತಿ ಪಡೆದಿದ್ದಾರೆ.

ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಶತಕ ಸಿಡಿಸಿದ್ದರು. ಈ ಪ್ರದರ್ಶನದ ಕಾರಣದಿಂದಾಗಿ ಶುಬ್ಮನ್ ಗಿಲ್ ವೃತ್ತಿ ಜೀವನದ ಅತ್ಯುತ್ತಮ 3ನೇ ಶ್ರೇಯಾಂಕಕ್ಕೆ ಏರಿದ್ದಾರೆ.

ಇನ್ನು ಭಾರತ ತಂಡದ ಮತ್ತೋರ್ವ ಯುವ ಆಟಗಾರ ಎಡಗೈ ವೇಗದ ಬೌಲರ್ ಅರ್ಷ್‌ದೀಪ್ ಸಿಂಗ್ ಕೂಡ ಏರಿಕೆ ಕಂಡಿದ್ದಾರೆ. ಅರ್ಶ್‌ದೀಪ್ ಅಹ್ಮದಾಬಾದ್‌ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ 16 ರನ್‌ಗಳಿಗೆ 2 ವಿಕೆಟ್ ಪಡೆದುಕೊಂಡಿದ್ದರು. ಇದರ ಕಾರಣದಿಂದ 8 ಸ್ಥಾನಗಳ ಏರಿಕೆ ಕಂಡಿರುವ ಅರ್ಶ್‌ದೀಪ್ ವೃತ್ತಿಜೀವನದ ಅತ್ಯುತ್ತಮ 13 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಬ್ಯಾಟರ್‌ಗಳ ಪಟ್ಟಿಯಲ್ಲಿ 53ನೇ ಸ್ಥಾನದಿಂದ 50ನೇ ಸ್ಥಾನಕ್ಕೆ ಏರಿಕೆ ಕಂಡಿರುವ ಹಾರ್ದಿಕ್ ಬೌಲರ್‌ಗಳ ಪಟ್ಟಿಯಲ್ಲಿ 66ನೇ ಸ್ಥಾನದಿಂದ 46ನೇ ಸ್ಥಾನವನ್ನು ಗಳಿಸಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ಹಾರ್ದಿಕ್ ಅಗ್ರಸ್ಥಾನದಲ್ಲಿರುವ ಶಕೀಬ್ ಅಲ್ ಹಸನ್ ಅವರಿಗಿಂತ ಎರಡು ಅಂಕಗಳ ಹಿಂದಿದ್ದಾರೆ.

ಕಿಂಬರ್ಲಿಯಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರ ಮ್ಯಾಚ್ ವಿನ್ನಿಂಗ್ 131 ರನ್‌ಗಳು ಅವರಿಗೆ 6 ಸ್ಥಾನಗಳ ಏರಿಕೆ ನೀಡಿದೆ. ಹೀಗಾಗಿ ಬಟ್ಲರ್ ಟಾಪ್ 20ಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಈ ಪಂದ್ಯದಲ್ಲಿ 62 ರನ್‌ಗಳಿಗೆ 4 ವಿಕೆಟ್ ಸಂಪಾದಿಸಿದ್ದರು. ಹೀಗಾಗಿ ಅವರು 19 ನೇ ಸ್ಥಾನಕ್ಕೆ ಏರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!