ಪ್ರತಿ ಬೂತ್ ಮಟ್ಟದಲ್ಲಿ ಚುನಾವಣಾ ತಯಾರಿಯನ್ನು ಚುರುಕುಗೊಳಿಸೋಣ: ಗೀತಾ ವಿವೇಕಾನಂದ

ಹೊಸದಿಗಂತ ವರದಿ,ಕಲಬುರಗಿ:

ಪ್ರತಿ ಬೂತ್ ಮಟ್ಟದಲ್ಲಿ ಮಹಿಳೆಯರ ಪಾತ್ರ ದೊಡ್ಡದಾಗಿದ್ದು,ಈಗಿನಿಂದಲೇ ಮಹಿಳಾ ಮೋಚಾ೯ದ ಪದಾಧಿಕಾರಿಗಳು ಹಾಗೂ ಕಾಯ೯ಕತ೯ರು ಚುನಾವಣಾ ತಯಾರಿಯನ್ನು ಚುರುಕುಗೊಳಿಸಬೇಕೆಂದು ಭಾರತೀಯ ಜನತಾ ಪಕ್ಷದ ಮಹಿಳಾ ಮೋಚಾ೯ದ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ತಿಳಿಸಿದರು.

ಬುಧವಾರ ನಗರದ ನೆಹರೂ ಗಂಜ್,ನ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಉತ್ತರ ಮಂಡಲದ ಬೂತ್ ಮಟ್ಟದ ಮಹಿಳಾ ಕಾಯ೯ಕತ೯ರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇನ್ನೇನು ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಆಗಲಿದ್ದು,ಪ್ರತಿ ಬೂತಗಳಲ್ಲಿ ಮಹಿಳೆಯರು ಚುರುಕಾಗಿ ಪಕ್ಷದ ಸಂಘಟನೆಯನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದು,ಮಹಿಳಾ ಸಬಲೀಕರಣಕ್ಕೆ ವಿಶೇಷ ಆಧ್ಯತೆ ನೀಡಿದೆ.ಈ ನಿಟ್ಟಿನಲ್ಲಿ ಸವ೯ ಸಮುದಾಯದ ಮಹಿಳೆಯರಿಗೆ ವಿಶೇಷವಾದ ಗೌರವವನ್ನು ಬಿಜೆಪಿ ಸಕಾ೯ರ ನೀಡಿದೆ ಎಂದರು.

ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಮಾತನಾಡಿ, ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ವಿಜಯಶಾಲಿ ಆಗಬೇಕಾದಲ್ಲಿ,ಕ್ಷೇತ್ರದ ಮಹಿಳೆಯರು ಕಿತ್ತೂರು ರಾಣಿ ಚೆನ್ನಮ್ಮ,ಜಾನ್ಸಿ ರಾಣಿ ಲಕ್ಷ್ಮಿಬಾಯಿ ಸೇರಿದಂತೆ ಅನೇಕ ಮಹಿಳಾ ಹೋರಾಟಗಾರರಂತೆ ನೀವು ಬೂತ್ ಮಟ್ಟದಲ್ಲಿ ಹೋರಾಡಬೇಕಾಗಿದೆ ಎಂದು.

ರಾಜ್ಯದ ಮೊದಲ ಬೂತ್ ಮಟ್ಟದ ಮಹಿಳಾ ಸಮಾವೇಶ ಇದಾಗಿದ್ದು,ಪ್ರತಿ.ಬೂತನಿಂದ 10ರಂತೆ ಒಟ್ಟು ಒಂದು ಸಾವಿರ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!