ರಾವಲ್ಪಿಂಡಿ ಕ್ರಿಕೆಟ್‌ ಮೈದಾನದಲ್ಲಿ ಕಳಪೆ ಪಿಚ್‌: ಐಸಿಸಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಪಿಂಡಿ ಕ್ರಿಕೆಟ್‌ ಸ್ಟೇಡಿಯಂ ನ ಪಿಚ್‌ ಕಳಪೆಯಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಆಕ್ರೋಶ ವ್ಯಕ್ತಪಡಿಸಿದೆ.
ಇತ್ತೀಚಿಗೆ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯಾವಳಿಯಲ್ಲಿ ಸಮಾನ ಸ್ಪರ್ಧೆ ನೀಡುವ ಪಿಚ್‌ ಇದಾಗಿರಲಿಲ್ಲ ಎಂದು ಪಂದ್ಯದ ರೆಫರಿ ರಂಜನ್‌ ಹೇಳಿದ್ದಾರೆ.
ಇನ್ನು ಐದು ದಿನಗಳ ಕಾಲ ನಡೆದ ಪಂದ್ಯದಲ್ಲಿ ಪಿಚ್‌ ಅತ್ಯಲ್ಪ ಪಟ್ಟದಲ್ಲಿ ಮಾತ್ರ ಬೌನ್ಸ್‌ ಆಗುತ್ತಿತ್ತು ಎಂಬುದು ಬಿಟ್ಟರೆ ಬೇರೆ ಯಾವುದೇ ವಿಶೇಷತೆ ಇಲ್ಲ. ಈ ಪಿಚ್‌ ವೇಗಿ ಬೌಲರ್‌ ಗಳಿಗೆ, ಸ್ಪಿನ್ನರ್ ಗಳಿಗೆ ನೆರವಾಗಿಲ್ಲ. ಈ ಎಲ್ಲಾ ಅಂಶಗಳನ್ನು ಗಮನಿಸಿದ ಐಸಿಸಿ ಪಿಂಡಿ ಕ್ರೀಡಾಂಗಣವನ್ನು ಕಳಪೆ ಪಟ್ಟಿಗೆ ಸೇರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!