Saturday, April 1, 2023

Latest Posts

ಇಂದು ಗುಜರಾತ್‌ ಗೆ ಪ್ರಧಾನಿ ಮೋದಿ ಭೇಟಿ: ವಿಧಾನಸಭಾ ಚುನಾವಣೆಗೆ ಪೂರ್ವತಯಾರಿ

 

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದು ನಾಲ್ಕು ರಾಜ್ಯಗಳಲ್ಲಿ ಐತಿಹಾಸಿಕ ಜಯಭೇರಿ ಭಾರಿಸಿರುವ ಬಿಜೆಪಿ ಆ ರಾಜ್ಯಗಳಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಿದೆ. ಬಿಜೆಪಿ ಗೆಲುವಿನ ಬೆನ್ನಲ್ಲೇ ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಇಂದು ತವರು ರಾಜ್ಯ ಗುಜರಾತ್‌ ಗೆ ಆಗಮಿಸುತ್ತಿದ್ದಾರೆ.
ಈ ವರ್ಷಾಂತ್ಯದಲ್ಲಿ ಗುಜರಾತ್‌ ವಿಧಾನಸಭೆಗೆ ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಅದಾಗಲೇ ಪೂರ್ವಭಾವಿ ತಯಾರಿಗಳನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಮೋದಿ ಗುಜರಾತ್‌ ಬೇಟಿ ಮಹತ್ವ ಪಡೆದಿದೆ.
ಶುಕ್ರವಾರ ಗುಜರಾತ್‌ ನ ಅಹ್ಮದಾಬಾದ್​ನಿಂದ ಬಿಜೆಪಿ ರಾಜ್ಯ ಪ್ರಧಾನಕಚೇರಿ ಇರುವ ಗಾಂಧಿನಗರದಲ್ಲಿರುವ ಕಮಲಂವರೆಗೆ ಪ್ರಧಾನಿ ರೋಡ್​ ಶೋ ನಡೆಸಲಿದ್ದಾರೆ. ಸುಮಾರು 10 ಕಿಮೀ ದೂರದವರೆಗೆ ರೋಡ್ ಶೋ ಸಾಗಿಬರಲಿದ್ದು, 4 ಲಕ್ಷಕ್ಕೂ ಅಧಿಕ ಜನರು ಸೇರುವ ಅಂದಾಜಿದೆ.
ನಂತರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸಂಸದರು, ಶಾಸಕರು, ಪದಾಧಿಕಾರಿಗಳು ಮತ್ತು ರಾಜ್ಯ ಕಾರ್ಯಕಾರಿ ಸದಸ್ಯರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅಹ್ಮದಾಬಾದ್​ನ ಜಿಎಂಡಿಸಿ ಮೈದಾನದಲ್ಲಿ, ಪಂಚಾಯತ್​ ರಾಜ್ ಸಂಸ್ಥೆಗಳ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾರ್ಚ್‌ 12ರಂದು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (ಆರ್‌ಆರ್‌ಯು) ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಭಾಷಣ ಮಾಡಲಿದ್ದಾರೆ.
ಆ ಬಳಿಕ ಸಂಜೆ, ಖೇಲ್​ ಮಹಾಕುಂಭ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಈ ಖೇಲ್​ ಮಹಾಕುಂಭ ಕಾರ್ಯಕ್ರಮದಡಿ ಗುಜರಾತ್‌ ನಾದ್ಯಂತ ಸುಮಾರು 500 ಪ್ರದೇಶಗಳಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಭಾಗಿಯಾಗಲು 47ಕ್ಕೂ ಲಕ್ಷಕ್ಕೂ ಅಧಿಕ ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!