Tuesday, March 28, 2023

Latest Posts

ICC Test Rankings: ವಿಶ್ವದ ನಂ.1 ಬೌಲರ್ ಆಗಿ ದಾಖಲೆ ಬರೆದ ಅಶ್ವಿನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಬುಧವಾರ ಬಿಡುಗಡೆ ಮಾಡಿದ್ದು , ಟೀಂ ಇಂಡಿಯಾದ ಸ್ಟಾರ್ ಆಫ್ ಸ್ಪಿನ್ನರ್ ಆರ್. ಅಶ್ವಿನ್ ನಂಬರ್ 1 ಸ್ಥಾನಕ್ಕೇರಿದ್ದಾರೆ.

ಈ ಹಿಂದೆ ನಂ.1 ಸ್ಥಾನದಲ್ಲಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ಹಿಂದಿಕ್ಕುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದಾರೆ.
864 ರೇಟಿಂಗ್ ಅಂಕಗಳೊಂದಿಗೆ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದರೆ, ಜೇಮ್ಸ್ ಆಂಡರ್ಸನ್ 859 ರೇಟಿಂಗ್ ಅಂಕಗಳನ್ನು ಹೊಂದಿದ್ದು 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಅಶ್ವಿನ್ ಹೊರತುಪಡಿಸಿ ಭಾರತದ ಇಬ್ಬರು ಬೌಲರ್‌ಗಳು ಐಸಿಸಿ ರ್ಯಾಂಕಿಂಗ್‌ನಲ್ಲಿ ಛಾಪು ಮೂಡಿಸಿದ್ದು, ಬಹುದಿನಗಳಿಂದ ಟೀಂ ಇಂಡಿಯಾದಿಂದ ದೂರವಿರುವ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನಕ್ಕೇರಿದ್ದರೆ, ರವೀಂದ್ರ ಜಡೇಜಾ 8ನೇ ಸ್ಥಾನಕ್ಕೆ ತಲುಪಿದ್ದಾರೆ.
ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿಯೂ ಮುಂಚೂಣಿಯಲ್ಲಿರುವ ಅಶ್ವಿನ್, ರ್ಯಾಂಕಿಂಗ್​ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಮತ್ತೊಬ್ಬ ಆಲ್​ರೌಂಡರ್ ರವೀಂದ್ರ ಜಡೇಜಾ ಈ ವಿಭಾಗದಲ್ಲಿ ನಂ.1 ಸ್ಥಾನವನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!