Tuesday, July 5, 2022

Latest Posts

ಐಸಿಸಿ ಮಹಿಳಾ ಕ್ರಿಕೆಟ್‌ ವಿಶ್ವಕಪ್​: ಪಾಕ್ ವಿರುದ್ಧ ಇಂಗ್ಲೆಂಡ್ ಗೆಲುವು, ಭಾರತಕ್ಕೆ ಮುಂದಿನ ಪಂದ್ಯ ಸವಾಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಐಸಿಸಿ ಮಹಿಳಾ ಕ್ರಿಕೆಟ್‌ ವಿಶ್ವಕಪ್​ ಇಂದಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್​ ಭರ್ಜರಿ ಗೆಲುವು ದಾಖಲಿಸಿದ್ದು, . ಹೀಗಾಗಿ, ಸೆಮಿಫೈನಲ್​ಗೆ ಭಾರತ ಪ್ರವೇಶ ಪಡೆದುಕೊಳ್ಳಬೇಕಾದರೆ ಮುಂದಿನ ಪಂದ್ಯದಲ್ಲಿ ಜಯ ಸಾಧಿಸಲೇಬೇಕಿದೆ.
ಪಾಕಿಸ್ತಾನ ವಿರುದ್ಧ 9 ವಿಕೆಟ್​​ಗಳ ಸುಲಭ ಜಯ ಸಾಧಿಸುವ ಮೂಲಕ ಇಂಗ್ಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಭಾರತ ಐದನೇ ಸ್ಥಾನಕ್ಕೆ ಕುಸಿದಿದೆ. ಮತ್ತೊಂದು ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಪಂದ್ಯ ಮಳೆಯಿಂದಾಗಿ ರದ್ಧುಗೊಂಡಿದೆ. ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಗಿದೆ.
ದಕ್ಷಿಣ ಆಫ್ರಿಕಾ ಈಗಾಗಲೇ ಸಮಿಫೈನಲ್​ ಪ್ರವೇಶಿಸಿದ್ದು, ವೆಸ್ಟ್​ ಇಂಡೀಸ್​ ತಂಡ ಆಡಿರುವ ಎಲ್ಲ ಪಂದ್ಯಗಳಿಂದ 7 ಅಂಕಗಳಿಕೆ ಮಾಡಿದ್ದು, ಸೆಮೀಸ್​​ ಸ್ಥಾನ ಇತರೆ ತಂಡಗಳ ಪಂದ್ಯಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.
ನ್ಯೂಜಿಲ್ಯಾಂಡ್​, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಈಗಾಗಲೇ ಪ್ರಶಸ್ತಿ ರೇಸ್​ನಿಂದ ಹೊರಬಿದ್ದಿವೆ.ಆಸ್ಟ್ರೇಲಿಯಾ ಮೊದಲ ತಂಡವಾಗಿ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದೆ. ಉಳಿದಂತೆ 9 ಪಾಯಿಂಟ್ ಗಳಿಕೆ ಮಾಡಿರುವ ಆಫ್ರಿಕಾ ಕೂಡ ಎರಡನೇ ತಂಡವಾಗಿ ನಾಲ್ಕರ ಘಟ್ಟ ಪ್ರವೇಶಿಸಿದೆ.
ನಾಲ್ಕರ ಸ್ಥಾನಕ್ಕಾಗಿ ಇದೀಗ ವೆಸ್ಟ್​ ಇಂಡೀಸ್​, ಭಾರತ ಮತ್ತು ಇಂಗ್ಲೆಂಡ್ ನಡುವೆ ಫೈಟ್​ ಏರ್ಪಟ್ಟಿದೆ. ಈ ತಂಡಗಳು ಕ್ರಮವಾಗಿ 3,4 ಮತ್ತು 5ನೇ ಸ್ಥಾನದಲ್ಲಿದ್ದು, ವೆಸ್ಟ್​ ಇಂಡೀಸ್ ಈಗಾಗಲೇ ಎಲ್ಲ ಪಂದ್ಯಗಳನ್ನಾಡಿ 7 ಅಂಕ ಗಳಿಸಿದೆ. ಆದರೆ, ಭಾರತ ಮತ್ತು ಇಂಗ್ಲೆಂಡ್​ಗೆ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ಇಲ್ಲಿ ಗೆಲುವು ಅನಿವಾರ್ಯ.
ನಾಲ್ಕರ ಹಂತಕ್ಕೆ ಬರಲು ಭಾರತ ಮಹಿಳಾ ತಂಡ ಲಗ್ಗೆ ಹಾಕಲು ಮುಂದಿನ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಬೇಕಿದೆ. ದ.ಆಫ್ರಿಕಾ ಈಗಾಗಲೇ ತಾನಾಡಿರುವ 6 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಪಡೆದಿದ್ದು, ಟೀಂ ಇಂಡಿಯಾಗೆ ಕಠಿಣ ಸವಾಲು ನೀಡುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss