ICC World Cup: ಇಂಗ್ಲೆಂಡ್ ವನಿತೆಯರನ್ನು 71 ರನ್ ಗಳಿಂದ ಮಣಿಸಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್
ನ್ಯೂಜಿಲ್ಯಾಂಡ್ ನಲ್ಲಿ ಆಯೋಜನೆಯಾಗಿದ್ದ 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವನಿತೆಯನ್ನು 71 ರನ್ ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ವನಿತೆಯರು ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಈ ಮೂಲಕ ಆಸ್ಟ್ರೇಲಿಯಾ ದಾಖಲೆಯ ಏಳನೇ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆಗೆ ಭಾಜನರಾಗಿದ್ದಾರೆ.
ಕ್ರಿಸ್ಟ್​​ಚರ್ಚ್​ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸಿಸ್ ವನಿತೆಯರು 50 ಓವರ್​ಗೆ 356 ರನ್ ಗಳ ಬೃಹತ್ ಮೊತ್ತ ದಾಖಲಿಸಿದರು. ವಿಕೆಟ್ ಕೀಪರ್ ಅಲಿಸಾ ಹೀಲಿ ಬ್ಯಾಟಿಂಗ್ ನಲ್ಲಿ ಅಕ್ಷರಶಃ ಅಬ್ಬರಿಸಿದರು. ಅವರು 170 ರನ್ ಸಿಡಿಸಿದರು. ಅವರಿಗೆ ಉತ್ತಮ‌ ಬೆಂಬಲ ನೀಡಿದ ರಚೆಲ್‌ ಹೇನ್ಸ್ ಮತ್ತು ಬೆತ್ ಮೂನಿ ಅರ್ಧಶತಕದ ಕಾಣಿಕೆ ನೀಡಿದರು. ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ 285 ರನ್​ಗೆ ಸರ್ವಪತನ ಕಂಡಿತು.
ಇಂಗ್ಲೆಂಡ್ ಪರ ನಥಾಲಿ ಕೀವರ್ 121 ಎಸೆತಗಳಲ್ಲಿ 15 ಫೋರ್, 1 ಸಿಕ್ಸರ್​ನೊಂದಿಗೆ 148 ರನ್ ಸಿಡಿಸಿ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾ ಪರ ಅಲನ್ ಕಿಂಗ್ ಹಾಗೂ ಜೆಸ್ ಜಾನ್ಸೆನ್ ತಲಾ 3 ವಿಕೆಟ್ ಕಿತ್ತರೆ ಮೆಗನ್ ಸ್ಕಟ್ 2 ವಿಕೆಟ್ ಪಡೆದರು.
ಚಾಂಪಿಯನ್ ಆಸ್ಟ್ರೇಲಿಯಾ ತಂಡ 9.94 ಕೋಟಿ ಬಹುಮಾನ ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!