ಮಹಿಳಾ ವಿಶ್ವಕಪ್:‌ ಆಸ್ಟ್ರೇಲಿಯಾ ವಿರುದ್ಧ ಬೃಹತ್‌ ಮೊತ್ತ ದಾಖಲಿಸಿಯೂ ಸೋಲುಂಡ ಮಿಥಾಲಿ ಪಡೆ

ಹೊಸ ದಿಗಂತ ಡಿಜಿಟಲ್‌ ಡೆಸ್ಕ್
ನ್ಯೂಜಿಲ್ಯಾಂಡ್‌ ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ವನಿತೆಯರು 6 ವಿಕೆಟ್‌ ಗಳ ಆಘಾತಕಾರಿ ಸೋಲು ಕಂಡಿದ್ದಾರೆ. ಬಲಿಷ್ಠ ಆಸಿಸ್‌ ವಿರುದ್ಧ ಬೃಹತ್‌ ಮೊತ್ತ ಕಲೆಹಾಕಿದ ಹೊರತಾಗಿಯೂ ಬೌಲಿಂಗ್‌ ನಲ್ಲಿ ನೀರಸ ಪ್ರದರ್ಶನ ತೋರಿದ ಮಿಥಾಲಿ ರಾಜ್‌ ಪಡೆ ಟೂರ್ನಿಯಲ್ಲಿ ಮೂರನೇ ಸೋಲಿಗೆ ಶರಣಾಗಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಟೀಂ ಇಂಡಿಯಾ ನಿಗದಿತ 50 ಓವರ್‌ ಗಳಲ್ಲಿ 277 ರನ್‌ ಕಲೆಹಾಕಿತು. ಭಾರತದ ಪರ ಬ್ಯಾಟಿಂಗ್‌ ನಲ್ಲಿ ಮಿಂಚಿದ ನಾಯಕಿ ಮಿಥಾಲಿ ರಾಜ್‌ (68), ಯಸ್ತಿಕಾ ಭಾಟಿಯಾ (59), ಉಪನಾಯಕಿ ಹರ್ಮಾನ್‌ ಪ್ರೀತ್‌ 57 ರನ್‌ ಕಲೆಹಾಕಿದರು.
ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ವನಿತೆಯರು ನಾಯಕಿ ಮೆಗ್ ಲ್ಯಾನಿಂಗ್ ಅಮೋಘ 97 ರನ್ ಹಾಗೂ ವಿಕೆಟ್ ಕೀಪರ್ ಅಲೈಸಾ ಹೀಲಿ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ 49.3 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿ ರೋಚಕ ಗೆಲುವು ಕಂಡಿತು. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಸೆಮಿ ಫೈನಲ್​ಗೇರಿದೆ. ಭಾರತದ ವನಿತೆಯರು ಆಡಿದ 5 ಪಂದ್ಯಗಳಲ್ಲಿ ಮೂರು ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!