ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ವಿಶ್ವಕಪ್ 2023ರ ತಂಡವನ್ನು ಐಸಿಸಿ ಪ್ರಕಟಿಸಿದ್ದು, ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ.
ಇದರ ಜೊತೆಗೆ ಟೀಮ್ ಇಂಡಿಯಾದಿಂದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಸಹಿತ ಆರು ಆಟಗಾರರು ಸ್ಥಾನ ಪಡೆದಿದ್ದಾರೆ.
ವಿಶ್ವಕಪ್ ಇಲೆವೆನ್’ನ ಇತರ ಐದು ಸದಸ್ಯರು ಚಾಂಪಿಯನ್ ಆಸ್ಟ್ರೇಲಿಯಾ (2), ಸೆಮಿಫೈನಲ್ ತಲುಪಿದ ದಕ್ಷಿಣ ಆಫ್ರಿಕಾ (1) ಮತ್ತು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ (1).
ಆಸ್ಟ್ರೇಲಿಯಾದಿಂದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಲೆಗ್ ಸ್ಪಿನ್ನರ್ ಆಡಮ್ ಜಂಪಾ ಮಾತ್ರ ಸ್ಥಾನ ಪಡೆದಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಇಯಾನ್ ಬಿಷಪ್, ಕಾಸ್ ನೈದೂ, ಶೇನ್ ವ್ಯಾಟ್ಸನ್ (ವೀಕ್ಷಕವಿವರಣೆಗಾರ), ವಾಸಿಮ್ ಖಾನ್ (ಐಸಿಸಿ ಜನರಲ್ ಮ್ಯಾನೇಜರ್, ಕ್ರಿಕೆಟ್) ಮತ್ತು ಸುನಿಲ್ ವೈದ್ಯ (ಪತ್ರಕರ್ತ, ಅಹಮದಾಬಾದ್ ಮಿರರ್) ಇದ್ದರು.