ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನನ್ನು ಅಮಾನತು ಮಾಡಿರೋ ಪಕ್ಷದ ನಿರ್ಧಾರವೇ ಕಾನೂನು ಬಾಹಿರ ಎಂದು ಮತ್ತೆ ಸಿಎಂ ಇಬ್ರಾಹಿಂ (CM Ibrahim) ದೇವೇಗೌಡ (HD Deve Gowda) ಹಾಗೂ ಕುಮಾರಸ್ವಾಮಿ (HD Kumaraswamy) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರು ಪ್ರಧಾನಿ ಆಗಿದ್ದರು. 70 ವರ್ಷ ರಾಜಕೀಯದಲ್ಲಿ ಇರೋರು. ದೇವೇಗೌಡರು ತಪ್ಪು ಮೇಲೆ ತಪ್ಪು ಮಾಡ್ತಿದ್ದಾರೆ. ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದಿದ್ದೇ ತಪ್ಪು. ನನ್ನನ್ನು ತೆಗೆಯಬೇಕಾದ್ರೆ ಸಭೆ ಮಾಡಿ 2/3 ಮೆಜಾರಿಟಿಯಲ್ಲಿ ತೆಗೆಯಬೇಕು. ಇಲ್ಲದೆ ಹೋದ್ರೆ ಅವಧಿ ಮುಗಿಯಬೇಕು. ಇಲ್ಲ ನಾನು ಸಾಯಬೇಕು ಎಂದು ಹೇಳಿದರು.
ಕೇರಳದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಸಿಕೆ ನಾನು ಕರೆದಿದ್ದು , ನಾನು ಅಲ್ಲ. 12 ರಾಜ್ಯದ ಜಿಲ್ಲಾ ಅಧ್ಯಕ್ಷರು ಆ ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ದೇವೇಗೌಡರು ಮಗನ ಮಾತು ಕೇಳಿ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ದೇವೇಗೌಡರಿಗೆ ಮತ್ತೊಮ್ಮೆ ಅವಕಾಶ ಕೊಡೋಣ ಅಂತ ತೀರ್ಮಾನ ಆಗಿದೆ ಎಂದರು.
ಕುಮಾರಸ್ವಾಮಿ ಏಕಾಏಕಿಯಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಡಿಸೆಂಬರ್ 9 ರವರೆಗೂ ಅವಕಾಶ ಕೊಡಲಾಗಿದೆ. ಡಿಸೆಂಬರ್ 9ರ ಒಳಗೆ ನಿರ್ಧಾರ ವಾಪಸ್ ಮಾಡದೇ ಹೋದರೆ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಮಾಡ್ತೀವಿ ಅಂತ ಹೇಳಿದ್ದಾರೆ. ಬಿಜೆಪಿ ಜೊತೆ ಹೋಗಿ ಕುಮಾರಸ್ವಾಮಿ ಮಾತಾಡಿದ್ರು. ಅವರ ಮೇಲೆ ದೇವೇಗೌಡ ಅಮಾನತು ಮಾಡಬೇಕು. ಅದು ಬಿಟ್ಟು ನನ್ನನ್ನು ಅಮಾನತು ಮಾಡಿದ್ದೇ ನಿಯಮಬಾಹಿರ ಎಂದು ಕಿಡಿಕಾರಿದರು.
ನಾನು ಎಂಎಲ್‌ಎ ಸ್ಥಾನ ಬಿಟ್ಟು ಬಂದೆ. ಹೀಗೆ ಮಾಡಿದ್ದು ಸರಿನಾ ದೇವೇಗೌಡರೇ? ನಿಮ್ಮ ಮಗನಿಗಾಗಿ ಎಷ್ಟು ಜನರನ್ನು ಬಲಿ ಕೊಡಬೇಕು ಅಂತ ಇದ್ದೀರಾ? ನಿಮ್ಮ ಸಿದ್ದಾಂತಕ್ಕೆ ನೀವು ವಾಪಸ್ ಬನ್ನಿ. ದಸರಾ ಆಯ್ತು ಅಮಿತ್ ಶಾ ಕರೆದರಾ? ವಿಜಯೇಂದ್ರ, ಅಶೋಕ್ ಅಧ್ಯಕ್ಷ, ವಿಪಕ್ಷ ಸ್ಥಾನ ಮಾಡಿದ್ರು. ಅವರ ಮುಂದೆ ಹೋಗಿ ಕುಮಾರಸ್ವಾಮಿ ನಿಲ್ತೀರಾ? 2 ಸೀಟಿಗೋಸ್ಕರ ಅಮಿತ್ ಶಾ ಮುಂದೆ ದೇವೇಗೌಡ ಹೋಗಿ ನಿಂತುಕೊಳ್ಳೋದಾ? ಜೆಡಿಎಸ್ ಅವರು ಮೈಮೇಲೆ ಬಿದ್ದು ಬಿಜೆಪಿ ಜೊತೆ ಹೋಗ್ತಿದ್ದಾರೆ. ತೆನೆ ಹೊತ್ತ ಮಹಿಳೆಯನ್ನು ಯಾರ ಯಾರ ಹತ್ತಿರ ಕರೆದುಕೊಂಡು ಹೋಗ್ತೀರಾ? ಕಾಂಗ್ರೆಸ್ ಆಯ್ತು, ಬಿಜೆಪಿ ಆಯ್ತು ಇನ್ನು ಯಾರ ಜೊತೆ ಕಳಿಸ್ತೀರಾ ಎಂದು ಕಿಡಿಕಾರಿದರು.
ಚನ್ನಪಟ್ಟಣದಲ್ಲಿ 20 ಸಾವಿರ ಮುಸ್ಲಿಂ ಮತ ಪಡೆದು ಗೆದ್ರಲ್ಲ ಅದು ಯಾರ ಮುಖ ನೋಡಿ ಬಂತು. ಇದು ಸಂತೆ ವ್ಯಾಪಾರನಾ ದೇವೇಗೌಡರೇ? ಚಂದ್ರಶೇಖರ್ ರಾವ್ ಜೊತೆ ಹೋದ್ರಿ ಅವರನ್ನು ಬಿಟ್ರಿ. ಯಾರನ್ನಾದ್ರು ಒಬ್ಬರನ್ನು ಇಟ್ಕೊಳ್ಳಿ. ಕುಮಾರಸ್ವಾಮಿ ಶಿವಕುಮಾರ್‌ಗೆ ಸಿಎಂ ಆದ್ರೆ ಬೆಂಬಲ ಕೊಡ್ತೀನಿ ಅಂತೀರಾ. ಯಾರು ನಿಮಗೆ ಅಧಿಕಾರ ಕೊಟ್ಟಿದ್ದು? 19 ಜನ ಶಾಸಕರನ್ನು ಕೇಳಿದ್ರಾ? ಇದು ಕಂಪನಿನಾ? ರಾಜಕೀಯ ಪಕ್ಷನಾ? ಡಿಕೆಶಿ ನಿಮಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಅಂತ ಲೇವಡಿ ಮಾಡಿದರು.
19 ಜನ ಎಂಎಲ್‌ಎ ನಿಮ್ಮ ಜೊತೆ ನಿಲ್ಲೋದಿಲ್ಲ. ಡಿಸೆಂಬರ್ 9ರ ನಂತರ ಎಲ್ಲವೂ ಗೊತ್ತಾಗಲಿದೆ. ಮೋದಿಗೆ, ಅಮಿತ್ ಶಾಗೆ ವ್ಯಕ್ತಿಗತ ವಿರೋಧ ಇಲ್ಲ. ಸಿದ್ದಾಂತದ ಬಗ್ಗೆ ನಮ್ಮ ವಿರೋಧ ಇದೆ. ಡಿಸೆಂಬರ್ 9 ರಂದು ಸಭೆ ಆಗಲಿದೆ. ಅಲ್ಲಿ ಅಂತಿಮ ತೀರ್ಮಾನ ಮಾಡ್ತೀವಿ. ಶಾಸಕರ ಜೊತೆಗೂ ಮಾತಾಡ್ತಿದ್ದೇನೆ. ಅಮಾನತು ನಾನು ಒಪ್ಪಲ್ಲ. ತಾಳಿ ಕಟ್ಟಿರೋ ಹೆಂಡ್ತಿ ಅಲ್ಲ ನಾನು ಹೋಗು ಅಂತ ಹೋಗೋಕೆ. ಅವರಿಗೆ ಅಮಾನತು ಮಾಡೋಕೆ ಅಧಿಕಾರ ಇಲ್ಲ. ಭೋಜೇಗೌಡ ಏನ್ ರಿಪೋರ್ಟ್ ಕೊಟ್ರು? ಅವರು ಯಾರು ರಿಪೋರ್ಟ್ ಕೊಡೋಕೆ? ಕಾಂಗ್ರೆಸ್‌ಗೆ ವೋಟ್ ಹಾಕಿ ಅಂದವರು ಭೋಜೇಗೌಡ ಅವರು ಏನು ವರದಿ ಕೊಡೋದು? ಡಿಸೆಂಬರ್ 9 ರಂದು ದೇವೇಗೌಡರು ಒಪ್ಪದೇ ಹೋದ್ರೆ ಹೊಸ ರಾಷ್ಟ್ರೀಯ ಅಧ್ಯಕ್ಷ ಮಾಡ್ತೀವಿ ಎಂದು ಸವಾಲ್ ಹಾಕಿದರು.