VIRAL PHOTO| ನದಿಯಲ್ಲಿ ‘ಹಿಮ ಪುಷ್ಪ ‘ಮೈಮಾಟ: ಪ್ರಕೃತಿಯ ಪವಾಡಕ್ಕೆ ಬೆರಗಾದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀವು ಹಿಮದ ಹೂವುಗಳನ್ನು ನೋಡಿದ್ದೀರಾ? ಈ ಚಳಿಗಾಲದಲ್ಲಿ ಚೀನಾದ ನದಿಯೊಂದರಲ್ಲಿ ‘ಹಿಮ ಹೂವುಗಳು’ ಅರಳಿವೆ. ಚೀನಾದ ಸಾಂಗ್‌ಹುವಾ ನದಿಯಲ್ಲಿ ಅರಳಿದ ಹಿಮದ ಹೂವುಗಳ ಛಾಯಾಚಿತ್ರವನ್ನು ಮಾಜಿ ರಾಜತಾಂತ್ರಿಕ ಎರಿಕ್ ಸೋಲ್ಹೀಮ್ ಈ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಾಗ ಈ ನೈಸರ್ಗಿಕ ವಿಸ್ಮಯ ಬೆಳಕಿಗೆ ಬಂದಿದೆ. ಈ ಹಿಮದ ಹೂವುಗಳ ಮೇಲೆ ಬೀಳುವ ಸೂರ್ಯನ ಕಿರಣಗಳು ಆ ಹೂವುಗಳಿಗೆ ಹೆಚ್ಚಿನ ಸೌಂದರ್ಯವನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ.

ನದಿಯ ಸಂಪೂರ್ಣ ಮೇಲ್ಭಾಗವು ಹಿಮದಿಂದ ಆವೃತವಾಗಿದೆ. ನದಿಯ ಮೇಲ್ಭಾಗದಲ್ಲಿ, ಮಂಜುಗಡ್ಡೆಯ ತುಂಡುಗಳು ಹೂವುಗಳಂತೆ ರೂಪುಗೊಂಡಿವೆ. ಇದು ನಿಜಕ್ಕೂ ಅದ್ಭುತ ಎಂದು ನೆಟ್ಟಿಗರು ಬೆರಗಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!