ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಐಸಿಎಸ್‌ಇ ತರಗತಿ 10, ಐಎಸ್ಸಿ 12 ನೇ ತರಗತಿ ಬೋರ್ಡ್ ಪರೀಕ್ಷೆ 2023 ದಿನಾಂಕಗಳನ್ನು ಬಿಡುಗಡೆ ಮಾಡಲಾಗಿದೆ. ಐಸಿಎಸ್‌ಇ ತರಗತಿ 10 ಫೆಬ್ರವರಿ 27ರಿಂದ ಮತ್ತು ಐಎಸ್ಸಿ 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 13 ರಿಂದ ನಡೆಯಲಿವೆ.
ಇಂದು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ಐಸಿಎಸ್‌ಇ ತರಗತಿ 10 ಮತ್ತು ಐಎಸ್ಸಿ 12 ನೇ ತರಗತಿಗಳ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ
ಈ ಸಂಬಂಧ ವಿದ್ಯಾರ್ಥಿಗಳು cisce.org ನಲ್ಲಿ ವಿಷಯವಾರು ಐಸಿಎಸ್‌ಇ, ಐಎಸ್ಸಿ ಟೈಮ್ ಟೇಬಲ್ ಪಿಡಿಎಫ್ ಅನ್ನು ಪರಿಶೀಲಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲೆಗಳಿಂದ ಸಿಐಎಸ್ಸಿಇ 10, 12 ಡೇಟ್ಶೀಟ್ 2023 ಅನ್ನು ಪಡೆಯಬಹುದಾಗಿದೆ.