ಹಿಮಾವೃತವಾದ ಜಮ್ಮುವಿನ ರಸ್ತೆ: ವಾಹನಗಳಿಗೆ ಆಂಟಿ-ಸ್ಕಿಡ್ ಚೈನ್‌ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮುವಿನಲ್ಲಿ ಹಿಮಪಾತ ಅಧಿಕವಾಗುತ್ತಿದ್ದು, ಹೀಗಾಗಿ ವಾಹನಗಳಿಗೆ ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆಡಳಿತ ಮಹತ್ವದ ಆದೇಶವನ್ನು ನೀಡಿದೆ.

ಜನರ ಸುರಕ್ಷತೆಗಾಗಿ, ಹಿಮದಿಂದ ಆವೃತವಾದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಆಂಟಿ-ಸ್ಕಿಡ್ ಚೈನ್‌ಗಳನ್ನು ಕಡ್ಡಾಯಗೊಳಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಲಡಾಖ್ ಪ್ರಸ್ತುತ ತೀವ್ರವಾದ ಶೀತ ವಲಯದ ಹಿಡಿತದಲ್ಲಿದೆ ಮತ್ತು ಘನೀಕರಿಸುವ ತಾಪಮಾನವು ಹಿಮಾವೃತ ರಸ್ತೆ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಆಂಟಿ-ಸ್ಕಿಡ್ ಚೈನ್‌ ಕಡ್ಡಾಯಗೊಳಿಸಲಾಗಿದೆ.

ಈ ಕುರಿತು ಲಡಾಖ್‌ನ ಆಯುಕ್ತ-ಕಾರ್ಯದರ್ಶಿ ಸಾರಿಗೆ ಇಲಾಖೆ ಸೌಘತ್ ಬಿಸ್ವಾಸ್ ಅಧಿಸೂಚನೆಯಲ್ಲಿ ತಿಳಿಸಿದ್ದು, ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಾಹನಗಳು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯವಾಗಿ ಟೈರ್‌ಗಳಿಂದ ಕಟ್ಟಲಾದ ಆಂಟಿ-ಸ್ಕಿಡ್ ಚೈನ್‌ಗಳನ್ನು ಬಳಸಬೇಕು ಎಂದು ತಿಳಿಸಿದ್ದಾರೆ. ಒಂದುವೇಳೆ ನಿಯಮ ಉಲ್ಲಂಘಿಸುವವರಿಗೆ ಮೋಟಾರು ವಾಹನ ಕಾಯ್ದೆ 1988ರ ಅಡಿಯಲ್ಲಿ 1000 ರೂ.ಗಳ ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು.

ಲೇಹ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 15.2 ಡಿಗ್ರಿ ಸೆಲ್ಸಿಯಸ್, ಕಾರ್ಗಿಲ್ ಮೈನಸ್ 16.9 ಡಿಗ್ರಿ ಸೆಲ್ಸಿಯಸ್ ಮತ್ತು ದ್ರಾಸ್‌ನಲ್ಲಿ ಮೈನಸ್ 23.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!