Thursday, March 30, 2023

Latest Posts

ಖಾಸಗೀಕರಣದ ಹಾದಿಯಲ್ಲಿದೆ ಐಡಿಬಿಐ ಬ್ಯಾಂಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲೊಂದಾದ ಇಂಡಸ್ಟ್ರಿಯಲ್‌ ಡೆವಲಪ್‌ಮೆಂಟ್‌ ಬ್ಯಾಂಕ್ ಆಫ್ ಇಂಡಿಯಾ‌ (IDBI) ವನ್ನು ಖಾಸಗೀರಕರಣ ಗೊಳಿಸಲಾಗುತ್ತಿದ್ದು ಈ ಕುರಿತು ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸರ್ಕಾರ ಹೇಳಿದೆ. ಐಡಿಬಿಐ ಮಾರಾಟ ಮುಂದೂಡಲ್ಪಡುವ ಸಾಧ್ಯುತೆಗಳಿವೆ ಎಂಬ ಮಾಧ್ಯಮವರದಿಗಳನ್ನು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ತಳ್ಳಿಹಾಕಿದ್ದು ಷೇರುಗಳ ಮಾರಾಟ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು DIPAM ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ ಸರ್ಕಾರ ಹಾಗು ಭಾರತೀಯ ಜೀವ ವಿಮಾ ನಿಗಮಗಳು ಐಡಿಬಿಐ ಬ್ಯಾಂಕಿನಲ್ಲಿ 90 ಶೇಕಡಾಗೂ ಅಧಿಕ ಪಾಲುಹೊಂದಿದ್ದವು. ಆದರೆ ಪ್ರಸ್ತುತ ತಮ್ಮಲ್ಲಿರುವ ಪಾಲಿನಲ್ಲಿ 61 ಶೇಕಡಾದಷ್ಟು ಪಾಲನ್ನು ಇವು ಮಾರಾಟ ಮಾಡಲಿವೆ. ಮಾರಾಟದ ನಂತರ ಇವುಗಳ ಪಾಲು 34 ಶೇಕಡಾಗೆ ಇಳಿಕೆಯಾಗಲಿದೆ. ಪ್ರಸ್ತುತ, ಸರ್ಕಾರ ಮತ್ತು ಆರ್‌ಬಿಐ ಸ್ವೀಕರಿಸಿದ ಬಿಡ್‌ಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!