ಮೂರನೇ ತ್ರೈಮಾಸಿಕದ ಲಾಭದಲ್ಲಿ 60 ಶೇಕಡಾ ಏರಿಕೆ ದಾಖಲಿಸಿದ ಐಡಿಬಿಐ ಬ್ಯಾಂಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ ಪ್ರತಿಷ್ಟಿತ ಬ್ಯಾಂಕುಗಳಲ್ಲೊಂದಾದ ಐಡಿಬಿಐ (IDB Bank) ಬ್ಯಾಂಕ್‌ ತನ್ನ ಮೂರನೇ ತ್ರೈಮಾಸಿಕದ ಲಾಭದಲ್ಲಿ 60 ಶೇಕಡಾ ಏರಿಕೆ ದಾಖಲಿಸಿದೆ. ಡಿಸೆಂಬರ್‌ 2022ರಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ತೆರಿಗೆಯ ನಂತರದ ಲಾಭದಲ್ಲಿ ಏರಿಕೆಯಾಗಿದ್ದು 927 ಕೋಟಿ ರೂ. ಲಾಭಗಳಿಸಲಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 578 ಕೋಟಿ ರೂ. ಲಾಭ ಗಳಿಸಲಾಗಿತ್ತು. ಈ ವರ್ಷದ ಲಾಭದಲ್ಲಿ 60 ಶೇಕಡಾ ಏರಿಕೆಯಾಗಿದೆ ಎಂದು ಬ್ಯಾಂಕ್‌ ಹೇಳಿದೆ.

ಬ್ಯಾಂಕ್‌ನ ಬಡ್ಡಿ ಆದಾಯವು ಶೇಕಡಾ 13 ರಷ್ಟು ಏರಿಕೆಯಾಗಿ 5,231 ಕೋಟಿ ರೂ.ಗೆ ತಲುಪಿದೆ ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 4,624 ಕೋಟಿ ರೂ.ಗಳಷ್ಟಿತ್ತು. ಬಡ್ಡಿಯೇತರ ಆದಾಯ ತುಸು ಕಡಿಮೆಯಾಗಿದ್ದು 25 ಶೇಕಾಡ ಕುಸಿತದೊಂದಿಗೆ 857 ಕೋಟಿ ರೂ.ಗಳಿಗೆ ಇಳಿದಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 1,138 ಕೋಟಿ ರೂ.ಗಳಷ್ಟಿತ್ತು. ನಿರ್ವಹಣಾ ಲಾಭವು ಹಿಂದಿನ ವರ್ಷದ1,768 ಕೋಟಿ ರೂ.ಗಳಿಂದ 16ಶೇಕಡಾ ಏರಿಕೆಯಾಗಿ 2,051 ಕೋಟಿ ರೂ.ಗಳಿಗೆ ತಲುಪಿದೆ.

ವಾಣಿಜ್ಯನಗರಿ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂಡಿರುವ ಐಡಿಬಿಐ ಬ್ಯಾಂಕಿನ CASA (ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ) ಸಂಗ್ರಹವು 1,26,663 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 1,21,732 ಕೋಟಿ ರೂ.ಗಳಷ್ಟಿತ್ತು ಅಂದರೆ ವರ್ಷದಿಂದ ವರ್ಷಕ್ಕೆ ನಾಲ್ಕು ಶೇಕಡಾದಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್‌ ಹೇಳಿದೆ.

ಇನ್ನು ಅನುತ್ಪಾದಕ ಆಸ್ತಿಗಳ ಅನುಪಾತದಲ್ಲಿಯೂ ಸುಧಾರಣೆಗಳು ದಾಖಲಾಗಿದ್ದು 2021ರ ಡಿಸೆಂಬರ್‌ ನಲ್ಲಿ 21.68 ರಷ್ಟಿದ್ದ ಅನುತ್ಪಾದಕ ಆಸ್ತಿಗಳ ಅನುಪಾತವು 2022ರ ಡಿಸೆಂಬರ್‌ ನಲ್ಲಿ 13.82 ಶೇಕಡಾಗೆ ಕುಸಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!