SHOCKING VIDEO| ಜೆಸಿಬಿ ಮೇಲೆ ಉರುಳಿ ಬಿದ್ದ ಬೃಹತ್‌ ಬಂಡೆಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರೀ ಮಳೆಯಿಂದಾಗಿ ಕುಲು ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ತೆರವು ಕಾರ್ಯಾಚರಣೆಗಾಗಿ ಕಾರ್ಮಿಕರು ಜೆಸಿಬಿಗಳ ಸಹಾಯದಿಂದ ನಿರಂತರ ಶ್ರಮಿಸುತ್ತಿದ್ದಾರೆ. ಈ ವೇಳೆ ಏಕಾಏಕಿ ಜೆಸಿಬಿ ಮೇಲೆ ಬೃಹತ್‌ ಬಂಡೆಗಳು ಬಿದ್ದಿದ್ದು, ಚಾಲಕ ಸ್ವಲ್ಪದರಲ್ಲೇ ದೊಡ್ಡ ಅಪಘಾತದಿಂದ ಪಾರಾಗಿದ್ದಾರೆ. ಆಘಾತಕಾರಿ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದಾರೆ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡ ಘಟನೆಯ ವಿಡಿಯೋ ಭಯ ಹುಟ್ಟಿಸುವಂತಿದೆ. ಇಂತಹ ಕೆಲಸದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಕಾರ್ಮಿಕರನ್ನು ಪ್ರೋತ್ಸಾಹಿಸಬೇಕು. ಆದರೆ ಅದೇ ವೇಳೆ ಅವರ್ಯಾರೂ ಕ್ಯಾಪ್ ಧರಿಸಿರಲಿಲ್ಲ ಎಂಬ ಟೀಕೆಯೂ ವ್ಯಕ್ತವಾಗಿತ್ತು. ಪರ್ವೀನ್ ಕಸ್ವಾನ್ ಕೂಡ ಈ ವೀಡಿಯೊವನ್ನು ‘ಕೇಪ್ಸ್ ಇಲ್ಲದ ಹೀರೋಸ್’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ವಿಡಿಯೋಗೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಅಂತಹ ಭಯಾನಕ ಪರಿಸ್ಥಿತಿಗಳಲ್ಲಿ ಸರಿಯಾದ ಸುರಕ್ಷತೆಯಿಲ್ಲದೆ ಕೆಲಸ ಮಾಡುವುದು ತಮ್ಮ ಜೀವಕ್ಕೆ ಅಪಾಯಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೂಲಿ ಕಾರ್ಮಿಕರು ತಲೆಗೆ ಹೆಲ್ಮೆಟ್ ಕೂಡ ಹಾಕಿಕೊಳ್ಳದೆ ಸಂಕಷ್ಟದ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂಬ ಟೀಕೆಗಳು ಹರಿದು ಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!