ಹೊಸದಿಗಂತ ಡಿಜಿಟಲ್ ಡೆಸ್ಕ್ :
78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪ್ರಧಾನಿ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.
ದೇಶದ ಸ್ವಾತಂತ್ರ್ಯದಲ್ಲಿ ದಲಿತರು, ಮಹಿಳೆಯರು, ಆದಿವಾಸಿಗಳು ಸೇರಿದಂತೆ ಪ್ರತಿಯೊಬ್ಬರ ಕೊಡುಗೆ ಇದೆ. 1857ಕ್ಕೂ ಮುನ್ನವೇ ದೇಶದ ಬುಡಕಟ್ಟು ಪ್ರದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿತ್ತು, ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಎಲ್ಲರಿಗೂ ನಮ್ಮ ನಮನಗಳು ಎಂದಿದ್ದಾರೆ.
ಭಾರತದಿಂದ ವಸಾಹತುಶಾಹಿ ಆಡಳಿತವನ್ನು ಕಿತ್ತೊಗೆದ 40 ಕೋಟಿ ಜನರ ರಕ್ತವನ್ನು ನಾವು ಒಯ್ಯುತ್ತೇವೆ ಎಂಬ ಹೆಮ್ಮೆ ನಮಗೆ ಇದೆ. ನಾವು ಇಂದು 140 ಕೋಟಿ ಜನರಿದ್ದೇವೆ, ನಾವೆಲ್ಲ ಸಂಕಲ್ಪ ಮಾಡಿ ಒಂದೇ ದಿಕ್ಕಿನಲ್ಲಿ ಸಾಗಿದರೆ ನಾವು 2047 ರ ವೇಳೆಗೆ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ‘ವಿಕ್ಷಿತ್ ಭಾರತ್’ ಆಗಬಹುದು ಎಂದರು.
ಮಾಧ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವಂತೆ ಸಲಹೆ ನೀಡಿದ ಪಿಎಂ ಮೋದಿ, ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವಂತೆ ಆಗಲಿ. ಆತ್ಮನಿರ್ಭರ್ದಿಂದ ದೇಶ ಮತ್ತಷ್ಟು ಅಭಿವೃದ್ಧಿ ಆಗುತ್ತಿದೆ. ಆದಷ್ಟು ಬೇಗ ಭಾರತ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ.
‘ವೋಕಲ್ ಫಾರ್ ಲೋಕಲ್’ ಯೋಜನೆ ಮೂಲಕ ಅಭಿವೃದ್ಧಿಯಾಗಿದೆ. ಗುಡಿ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ಕೊಟ್ಟಿದ್ದೇವೆ. ‘ವೋಕಲ್ ಫಾರ್ ಲೋಕಲ್’ ಆರ್ಥಿಕತೆಯ ಹೊಸ ಮಂತ್ರ. ಯೋಜನೆಯಿಂದ ಬುಡಕಟ್ಟು ಸಮುದಾಯಕ್ಕೆ ಲಾಭ ಆಗಿದೆ ಎಂದು ದೆಹಲಿಯ ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಾಹ್ಯಾಕಾಶ ಹಾಗೂ ಸೇನೆಯಲ್ಲೂ ಅಗಾಧ ಬದಲಾವಣೆ ತರಲಾಗಿದೆ. ಭಾರತೀಯ ಸೇನೆ ಸರ್ಜಿಕಲ್ ಹಾಗೂ ಏರ್ ಸ್ಟ್ರೈಕ್ ಮಾಡುವಷ್ಟು ಬೆಳೆದಿದೆ. ಭಾರತೀಯ ಸೇನೆ ಉಗ್ರರ ತಾಣಗಳಿಗೆ ನುಗ್ಗಿ ಹೊಡೆಯುತ್ತೆ. ದೇಶ ಮೊದಲು ಇದು ನಮ್ಮ ಸಂಕಲ್ಪ. ಭಾರತದ ಶಕ್ತಿ ಏನೆಂದು ಇಡೀ ಜಗತ್ತಿಗೆ ಗೊತ್ತಿದೆ. ಡಿಜಿಟಲೀಕರಣದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸ ಬಲ ಬಂದಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದರು.