ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರ ಇದೀಗ ಸಾಕಾರಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೇವಲ ಭರವಸೆ ನೀಡಿ ನಾವು ಸುಮ್ಮನಿರಲ್ಲ, ಅದನ್ನು ಈಡೇರಿಸುತ್ತೇವೆ. ಭಾರತವನ್ನು ಬಲಿಷ್ಠವಾಗಿ ನಿರ್ಮಿಸುವುದು ನಮ್ಮ ಕೆಲಸ. ನಮ್ಮ ಸರ್ಕಾರ ಕನಸು ಹಾಗೂ ಸಂಕಲ್ಪದ ಜೊತೆಗೆ ಮುನ್ನಡೆಯುತ್ತಿದ್ದೇವೆ ಎಂದಿದ್ದಾರೆ.
ಭಾರತದಲ್ಲಿ ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ವಿಶ್ವದಲ್ಲಿ ಭಾರತಕ್ಕೆ ಈಗ ಸುವರ್ಣ ಸಮಯಾವಕಾಶ ಇದೆ. ದೇಶದ 10 ಕೋಟಿ ಮಹಿಳೆಯರು ಸ್ವಾವಲಂಬನೆ ಸಾಧಿಸಿದ್ದಾರೆ. ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬನೆ ಸಾಧಿಸಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಸ್ಟಾರ್ಟ್ಅಪ್ ಆರಂಭಗೊಂಡಿದೆ. ಭಾರತ ಪ್ರತಿ ಕ್ಷೇತ್ರದಲ್ಲೂ ಆಧುನಿಕ ಉನ್ನತೀಕರಣದತ್ತ ಸಾಗುತ್ತಿದೆ. ಎಲ್ಲರ ಅಭಿವೃದ್ಧಿ ನಮ್ಮ ಕಾರ್ಯಶೈಲಿಯಲ್ಲಿ ಅಳವಡಿಸಿಕೊಂಡಿದ್ದೇವೆ ಎಂದರು.
ಆಯುಷ್ಮಾನ್ ಯೋಜನೆಯಿಂದ ಬಡವರಿಗೆ ಬಹಳ ಅನುಕೂಲವಾಗಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರ ಸಾಕಾರಗೊಂಡಿದೆ. ಅನಾವಶ್ಯಕ ಕಾನೂನುಗಳನ್ನು ನಾವು ತೆಗೆದು ಹಾಕಿದ್ದೇವೆ. ಹೊಸ ಅಪರಾಧಗಳ ಮೂಲದಲ್ಲೇ ನಿಯಂತ್ರಿಸುವ ಕೆಲಸ ಆಗುತ್ತಿದೆ.
ಕೆಲವು ಕಾನೂನುಗಳನ್ನು ತಿದ್ದುಪಡಿ ಮಾಡಿ ಗೊಂದಲ ನಿವಾರಣೆ ಮಾಡಿದ್ದೇವೆ. ಗ್ರಾ.ಪಂ ಮಟ್ಟದಲ್ಲಿ ಪ್ರತಿ 2 ವರ್ಷಗಳಿಗೆ ಪುನಶ್ಚೇತನಗೊಳಿಸುತ್ತಿದ್ದೇವೆ. ದೇಶದ ಪ್ರತಿ ವ್ಯಕ್ತಿಯ ಆದಾಯ ದ್ವಿಗುಣಗೊಳ್ಳುತ್ತಿದೆ. ನಿಮ್ಮ ಆಶೀರ್ವಾದದಿಂದ ದೇಶ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇವೆ ಎಂದರು.