ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬೆರೆಸಿದ್ದರೆ ನಿರ್ದಾಕ್ಷಿಣ್ಯ ಕ್ರಮ ಆಗಲಿ: ಸಚಿವ ಎಂ.ಬಿ. ಪಾಟೀಲ

ಹೊಸದಿಗಂತ ವಿಜಯಪುರ:

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬನ್ನು ಬೆರೆಸಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

 

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಮಿಶ್ರಣ ವಿಚಾರ ಕುರಿತು ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇದು ಜನರ ಧಾರ್ಮಿಕ ಭಾವನೆಗೆ ಸಂಭಂದಿಸಿದಂತದ್ದು. ಭಕ್ತರ, ಜನರ ಭಾವನೆಗಳ ಜೊತೆ ಆಟ ಆವಡುವುದು ಸರಿಯಲ್ಲ ಎಂದರು.

 

ಅದರಲ್ಲಿ ಪಾವಿತ್ರ್ಯತೆ ಇದೆ, ದನದ ಕೊಬ್ಬು ಬೆರೆಸುವುದು ತೀವ್ರವಾದ, ಘೋರವಾದ ಅಪರಾಧ. ಆಗಾಗ ಪ್ರಸಾದದ ತಪಾಸಣೆ ಮಾಡಬೇಕಿತ್ತು. ಈ ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೋ ಅವರ ಮೇಲೆ ಕ್ರಮ ಆಗಬೇಕು ಎಂದರು.

 

ಶಾಸಕ ಮುನರತ್ನ ಪ್ರಕರಣ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಸ್ವಾಭಾವಿಕವಾಗಿ ಯಾರೂ ಊಹಿಸದ ಆಪಾದನೆಗಳು ಅವರ ಮೇಲೆ ಬರುತ್ತಿವೆ. ಎಲ್ಲದರ ಕುರಿತು ತನಿಖೆ ಆಗಲಿ ಎಂದರು.

 

ನಿಜವಾಗಿ ಆ ರೀತಿ ಘೋರವಾದಂತಹ ಕೃತ್ಯ ಮಾಡಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಲಿದೆ. ಫಸ್ಟ್ ಟೈಮ್ ಊಹಿಸದಂತಹ ಆಪಾದನೆ ಕೇಳಿ ನನಗೂ ಗಾಬರಿಯಾದೆ ಎಂದರು.

 

ಹನಿಟ್ರ್ಯಾಪ್, ಸಿಡಿ ಮಾಡೋದು, ಹೆಣ್ಣುಮಕ್ಕಳ ಬಳಕೆ ಇವೆಲ್ಲ ಹೇಯ ಕೃತ್ಯಗಳು ಎಂದರು.

 

ಯತ್ನಾಳ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಯತ್ನಾಳ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ರಾಹುಲ್ ಗಾಂಧಿ, ಟಿಪ್ಪುಸುಲ್ತಾನ ಸೇರಿದಂತೆ ಎಲ್ಲರ ತಾಯಿ ಬಗ್ಗೆ ಮಾತಾಡುತ್ತಾರೆ. ಯತ್ನಾಳ ಅವರಿಗೆ ಬೇರೆಯವರ ತಾಯಿ, ತಂದೆ ಹೆಂಡತಿ, ಮಕ್ಕಳು ಯಾಕೆ ಬೇಕು ಎಂದರು.

 

ರಾಜಕಾರಣ ಕೇವಲ ರಾಜಕಾರಣ ಎಂಬಂತೆ ಮಾಡಬೇಕು ಅಷ್ಟೆ. ಅವರಂತೆ ನಮಗೂ ಮಾತನಾಡಲು ಬರುತ್ತೆ. ನಾವು ಸುಮ್ಮನೆ ಕುರೋದಿಲ್ಲ ಎಂದರು.

 

ನಮ್ಮ ಪಕ್ಷದವರಿಂದಲೇ ಏನು ಮಾಡೋಕಾಗಿಲ್ಲ ಎಂದು ಯತ್ನಾಳ ಹೇಳಿಕೆ ವಿಚಾರಕ್ಕೆ, ಬಿಜೆಪಿಯವರು ನರ ಸತ್ತವರು ಇರಬೇಕು ಅದಕ್ಕೆ ಹೆದರಿಲ್ಲ ಎಂದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!