Thursday, June 1, 2023

Latest Posts

ನಿಮ್ಮ ಆಶೀರ್ವಾದಿಂದ ಮಂತ್ರಿಯಾದರೆ ಇಡೀ ರಾಜ್ಯಕ್ಕೆ ಸೇವಕ: ಬಿ.ಸಿ.ಪಾಟೀಲ್ ಪರ ನಟ ದರ್ಶನ್ ಪ್ರಚಾರ!

ಹೊಸದಿಗಂತ ವರದಿ, ಹಾವೇರಿ

ಬಿಜೆಪಿ ಅಭ್ಯರ್ಥಿಯಾಗಿರುವ ಬಿ.ಸಿ.ಪಾಟೀಲರಿಗೆ ನಿಮ್ಮ ಮತವನ್ನು ನೀಡಿವ ಮೂಲಕ ಹೆಚ್ಚಿನ ಮತಗಳನ್ನುನೀಡಿ ಅವರನ್ನು ಆಯ್ಕೆ ಮಾಡಿ ಎಂದು ಚಿತ್ರ ನಟ ದರ್ಶನ್ ವಿನಂತಿಸಿಕೊಂಡರು.

ಜಿಲ್ಲೆಯ ಹಂಸಭಾವಿ, ಚಿಕ್ಕೇರೂರ, ಹಿರೇಕೆರೂರ, ಮಾಸೂರ, ರಟ್ಟೀಹಳ್ಳಿ, ಕೋಡ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ, ಮತಯಾಚನೆಮಾಡಿ ಮಾತನಾಡಿ, ಶಾಸಕರಾದರೆ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತರಾಗುತ್ತಾರೆ. ಆದರೆ ನಿಮ್ಮ ಆಶೀರ್ವಾದಿಂದ ಅವರೊಬ್ಬ ಮಂತ್ರಿಯಾದರೆ ಇಡೀ ರಾಜ್ಯಕ್ಕೆ ಸೇವಕರಾಗುತ್ತಾರೆ ಅದಕ್ಕೊಂದು ಅರ್ಥವಿರುತ್ತದೆ ಎಂದರು.

ಮತ್ತೊಮ್ಮೆ ಅವರ ಮೇಲೆ ಪ್ರೀತಿ, ವಿಶ್ವಾಸ, ಆಶೀರ್ವಾದ ಮಾಡುವ ಮೂಲಕ ಅವರು ಮತ್ತೊಮ್ಮೆ ಆಯ್ಕೆಯಾಗಿ ಮಂತ್ರಿ ಆಗುವದಕ್ಕೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡರು. ನನಗೆ ಎಲ್ಲ ಪಕ್ಷಗಳಲ್ಲಿ ರಾಜಕೀಯ ನಾಯಕರು ಪರಿಚಯವಿದ್ದಾರೆ. ಆದರೆ ಬಿ.ಸಿ.ಪಾಟೀಲರದು ನನ್ನದು ಬಹಳ ಉತ್ತಮ ಸ್ನೇಹ ಬಾಂಧ್ಯವ್ಯವಿದೆ ಆದ ಕಾರಣ ಅವರ ಕ್ರಮ ಸಂಖ್ಯೆ ಮೂರರ ಕಮಲದ ಗುರ್ತಿಗೆ ಹೆಚ್ಚಿನ ಮತಗಳನ್ನು ಅವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.

ಎಲ್ಲ ಮತಯಾಚನಾ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಹಾಗೂ ದರ್ಶನ್ ಅಭಿಮಾನಿಗಳು ಪಾಲ್ಗೊಂಡು ಜೈ ಕಾರಗಳೊಂದಿಗೆ ಸಂಭ್ರಮಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!