‘ನನ್ನ ಗಂಡನ ದುಡ್ಡು ನಾನು ಖರ್ಚು ಮಾಡಿದರೆ ನಿಮಗೇನು ಕಷ್ಟ?’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಲೋ ಟ್ರಿಪ್ ಮಾಡುತ್ತಿರುವ ಕಿರುತೆರೆ ನಟಿ ನಿವೇದಿತಾ ಗೌಡ ನೆಟ್ಟಿಗರ ವಿರುದ್ಧ ಗರಂ ಆಗಿದ್ದಾರೆ. ಸೋಲೋ ಟ್ರಿಪ್ ಮಾಡುತ್ತಾ ಇನ್ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದು, ಇದಕ್ಕೆ ನೆಟ್ಟಿಗರು ಗಂಡ ದುಡಿತಾನೇ ಅದಕ್ಕೆ ಎಂಜಾಯ್ ಮಾಡ್ತೀರಿ, ಗಂಡನನ್ನು ಬಿಟ್ಟು ಹೋಗಿದ್ದೀರಿ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.

ಇದಕ್ಕೆ ನಿವೇದಿತಾ ಉತ್ತರಿಸಿದ್ದು, ನನ್ನ ಜಾಗದಲ್ಲಿ ಚಂದನ್ ಟ್ರಿಪ್ ಹೋಗಿದ್ದರೆ ಯಾರಿಗೂ ಸಮಸ್ಯೆ ಇಲ್ಲ. ಹುಡುಗಿ ಎಂದ ಮಾತ್ರಕ್ಕೆ ಅವರಿಗೆ ಖಾಸಗಿ ಜೀವನ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದೀರಿ. ನಾನು ದುಡಿಯುತ್ತೇನೆ, ನನ್ನನ್ನು ಸಂಭಾಳಿಸುವಷ್ಟು ದುಡ್ಡಿದೆ. ಇನ್ನು ನನ್ನ ಗಂಡನ ದುಡ್ಡನ್ನೇ ಬಳಸಿದೆ ಎಂದಾದರೂ ಅದರಲ್ಲಿ ತಪ್ಪೇನಿದೆ?

ಮನೆಯಲ್ಲಿ ಕೂತು ಚೀಪ್ ಕಮೆಂಟ್ ಮಾಡುವ ಬದಲು ಹೊರಗೆ ಬನ್ನಿ, ಜಗತ್ತನ್ನು ನೋಡಿ ಟ್ರಾವೆಲ್ ಮಾಡಿ. ಆಗಲಾದರೂ ನಿಮ್ಮ ಹೃದಯ ವಿಶಾಲವಾಗಬಹುದು. ನನ್ನ ಗಂಡನ ಹಣ ನಾನು ವ್ಯರ್ಥ ಮಾಡ್ತಿಲ್ಲ. ಹೆಣ್ಣುಮಕ್ಕಳು ಈಗ ಆರ್ಥಿಕವಾಗಿ ಸಬಲರು. ಎಲ್ಲದಕ್ಕೂ ಗಂಡಿನ ಮೇಲೆ ಅವಲಂಬಿತರಾಗಿರೋದಿಲ್ಲ. ಒಂದು ವೇಳೆ ಆಕೆ ಆಗಲು ಬಯಸಿದರೂ ನಿಮ್ಮಂಥ ವರ್ಗದ ಜನ ಆಗಲು ಬಿಡೋದಿಲ್ಲ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!