Wednesday, November 29, 2023

Latest Posts

ಭಾರತ ವಿಶ್ವಕಪ್ ಗೆದ್ದರೆ 100 ಕೋಟಿ ರೂಪಾಯಿ ದಾನ ಮಾಡುವೆ: ಆಸ್ಟ್ರೋಟಾಕ್ ಕಂಪನಿ ಸಿಇಓ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಭಾರತ ವಿಶ್ವಕಪ್ ಗೆದ್ದರೆ ತಮ್ಮ ಬರೋಬ್ಬರಿ 100 ಕೋಟಿ ರೂಪಾಯಿ ದಾನ ಮಾಡುವುದಾಗಿ ಆಸ್ಟ್ರೋಟಾಕ್ ಕಂಪನಿ ಸಿಇಓ ಘೋಷಿಸಿದ್ದಾರೆ.

ದೆಹಲಿ ಮೂಲದ ಆಸ್ಟ್ರೋಟಾಕ್ ಕಂಪನಿ, ಭವಿಷ್ಯ ಹೇಳುವ ಸ್ಟಾರ್ಟ್‌ಅಪ್ ಕಂಪನಿ. ದೇಶಾದ್ಯಂತ ಹಲವು ಗ್ರಾಹಕರು ಆಸ್ಟ್ರೋಟಾಕ್ ನೋಂದಣಿ ಮಾಡಿಕೊಂಡು ತಮ್ಮ ಭವಿಷ್ಯ ತಿಳಿದುಕೊಳ್ಳುತ್ತಾರೆ. ಇದೀಗ ಈ ಗ್ರಾಹಕರಿಗೆ ಬಂಪರ್ ಅವಕಾಶ ಬಂದಿದೆ.

ಆಸ್ಟ್ರೋಟಾಕ್ ಸಿಇಒ ಪುನೀತ್ ಗುಪ್ತಾ ಬರೋಬ್ಬರಿ 100 ಕೋಟಿ ರೂಪಾಯಿ ಹಣವನ್ನು ಗ್ರಾಹಕರ ವಾಲೆಟ್‌ಗೆ ಹಾಕುವುದಾಗಿ ಹೇಳಿದ್ದಾರೆ.

ಪುನೀತ್ ಗುಪ್ತಾ ಘೋಷಣೆ ಬೆನ್ನಲ್ಲೇ ಇದೀಗ ಆಸ್ಟ್ರೋಟಾಕ್ ನೋಂದಣಿ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಲವರು ಆಸ್ಟ್ರೋಟಾಕ್ ನೋಂದಣಿ ಮಾಡಿಕೊಂಡು 100 ಕೋಟಿ ರೂಪಾಯಿ ಪಾಲು ಪಡೆಯಲು ಮುಂದಾಗಿದ್ದಾರೆ.

ವಿಶ್ವಕಪ್ ಟೂರ್ನಿ, ಭಾರತ ತಂಡದ ಕುರಿತು ಮೆಲುಕು ಹಾಕಿರುವ ಪುನೀತ್ ಗುಪ್ತಾ, 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ, ನಾನು ಚಂಡಿಘಡ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಪಂದ್ಯದ ಹಿಂದಿನ ನಾವು ಮಲಗಿರಲಿಲ್ಲ. ಕ್ರಿಕೆಟ್ ಕುರಿತ ಚರ್ಚೆ ಜೋರಾಗಿತ್ತು.ಆಡಿಟೋರಿಯಂನಲ್ಲಿ ಪಂದ್ಯ ವೀಕ್ಷಿಸಿದ್ದೇವೆ. ಭಾರತ ಗೆಲುವು ದಾಖಲಿಸುತ್ತಿದ್ದಂತೆ ರೋಮಾಂಚನಗೊಂಡಿದ್ದೆ. ಗೆಳೆಯರೆಲ್ಲಾ ಸಂಭ್ರಮ ಆಚರಿಸಿದ್ದೆವು. ಇದು ಅತ್ಯಂತ ಸಂತಸದ ದಿನಗಳಾಗಿತ್ತು ಎಂದು ಹೇಳಿದ್ದಾರೆ

ಇದೀಗ ಆಸ್ಟ್ರೋಟಾಕ್ ಮೂಲಕ ನಾವು ಅಪಾರ ಗ್ರಾಹಕರನ್ನು ಪಡೆದಿದ್ದೇವೆ. ಇದೀಗ ಈ ವಿಶ್ವಕಪ್ ಫೈನಲ್ ಸಂದರ್ಭದಲ್ಲಿ ಅಸ್ಟ್ರೋಟಾಕ್ ಗ್ರಾಹಕರಿಗೆ ಸಿಹಿ ಹಂಚಲು ಸಜ್ಜಾಗಿದ್ದೇನೆ. ಫಿನಾನ್ಸ್ ತಂಡದ ಜೊತೆ ಚರ್ಚೆ ನಡೆಸಿ ನಮ್ಮ ಗ್ರಾಹಕರಿಗೆ 100 ಕೋಟಿ ರೂಪಾಯಿ ನೀಡಲು ನಿರ್ಧರಿಸಿದ್ದೇವೆ. ಭಾರತ ಗೆದ್ದರೆ ನಮ್ಮ ಗ್ರಾಹಕರಿಗೆ ಹಣ ನೀಡುತ್ತೇವೆ. ಭಾರತ ಗೆಲುವಿಗಾಗಿ ಪ್ರಾರ್ಥಿಸಿ, ಚಿಯರ್ ಮಾಡಿ ಎಂದು ಪುನೀತ್ ಗುಪ್ತಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!