ಹೊಸದಿಗಂತ ಡಿಜಿಟಲ್ ಡೆಸ್ಕ್
ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿರುವ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ(ಎಎಸ್ಐ) ವರದಿ ಸಲ್ಲಿಸಲು ವಾರಣಾಸಿ ನ್ಯಾಯಾಲಯ ಶನಿವಾರ 10 ದಿನಗಳ ಕಾಲಾವಕಾಶ ನೀಡಿದೆ.
ವರದಿ ಸಲ್ಲಿಸಲು ಎಎಸ್ಐಗೆ ನವೆಂಬರ್ 17 ರವರೆಗೆ ಸಮಯ ನೀಡಲಾಗಿತ್ತು. ಆದರೆ ಶುಕ್ರವಾರ ಎಎಸ್‌ಐ ವಕೀಲರು ನ್ಯಾಯಾಲಯದಿಂದ 15 ದಿನಗಳ ಕಾಲಾವಕಾಶ ಕೋರಿದ್ದರು.
ಹಿಂದು ಪರ ಮದನ್ ಮೋಹನ್ ಯಾದವ್ ಪರ ವಕೀಲರ ಪ್ರಕಾರ, ತಾಂತ್ರಿಕ ವರದಿ ಲಭ್ಯವಿಲ್ಲದ ಕಾರಣ ಎಎಸ್ಐ ಹೆಚ್ಚಿನ ಕಾಲಾವಕಾಶ ಕೋರಿದೆ. ಇಂದು ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರು, ನವೆಂಬರ್ 28 ರೊಳಗೆ ವರದಿ ಸಲ್ಲಿಸುವಂತೆ ಎಎಸ್ಐಗೆ ಸೂಚಿಸಿದ್ದಾರೆ.