ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈನಲ್ಲಿ ಶುಕ್ರವಾರ ಸಂಜೆ ವಿಜಯ್ ಸೇತುಪತಿ ಅವರ ಹೊಸ ಸಿನಿಮಾ ‘ಬತ್ತಾ’ ಆಡಿಯೋ ಲಾಂಚ್ ಫಂಕ್ಷನ್ ಸಖತ್ ಗ್ರ್ಯಾಂಡ್ ಆಗಿ ನಡೀತು. ಈ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬಂದಿದ್ದ ತಮಿಳಿನ ಮಾಸ್ ನಿರ್ದೇಶಕ ಅಟ್ಲಿ, ಮೈಕ್ ಹಿಡಿತಿದ್ದಂಗೆ ಇಡೀ ಸಭಾಂಗಣದಲ್ಲಿದ್ದ ಜನ ಎದ್ದು ನಿಂತು ಚಪ್ಪಾಳೆ ಹೊಡೆಯೋಕೆ ಶುರು ಮಾಡಿದ್ರು. ವೇದಿಕೆ ಮೇಲೆ ನಿಂತು ತಮ್ಮ ಕರಿಯರ್ ಬಗ್ಗೆ ಮಾತನಾಡೋಕೆ ಶುರು ಮಾಡಿದ ಅಟ್ಲಿ, ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ದಳಪತಿ ಸಿ. ಜೋಸೆಫ್ ವಿಜಯ್ ಅವರಿಗೆ ಮನಸಾರೆ ಧನ್ಯವಾದ ತಿಳಿಸಿದ್ರು.
“ಇವತ್ತು ನಾನು ಹಾಕೊಂಡಿರೋ ಈ ಶರ್ಟು, ಪ್ಯಾಂಟು, ಕೈಯಲ್ಲಿರೋ ಈ ವಾಚು… ಎಲ್ಲವೂ ಕಷ್ಟಪಟ್ಟು ಸಂಪಾದಿಸಿದ್ದು ಹೌದು. ಆದ್ರೆ, ಇದರ ಹಿಂದೆ ನನ್ನ ದಳಪತಿ ವಿಜಯ್ ಅಣ್ಣನ ಆಶೀರ್ವಾದ ಖಂಡಿತ ಇದೆ. ಅವರ ಸಪೋರ್ಟ್ ಇಲ್ದಿದ್ರೆ ನಾನು ಈ ಮಟ್ಟಕ್ಕೆ ಬೆಳೆಯೋಕೆ ಚಾನ್ಸೇ ಇರ್ಲಿಲ್ಲ!” ಎಂದು ಅಟ್ಲಿ ಭಾವುಕರಾಗಿ ನುಡಿದರು.
ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡುತ್ತಾ, “2013 ರಲ್ಲಿ ಬಂದ ‘ರಾಜಾ ರಾಣಿ’ ಸಿನಿಮಾ ನನ್ನನ್ನ ಎಲ್ಲರಿಗೂ ಪರಿಚಯಿಸಿತು. ದೇವ್ರು, ಅಪ್ಪ-ಅಮ್ಮ ಮತ್ತು ನನ್ನ ಹೆಂಡತಿ ಆಶೀರ್ವಾದದಿಂದ ಆ ಸಿನಿಮಾ ಹಿಟ್ ಆಯ್ತು, ನನಗೂ ಒಳ್ಳೆ ಹೆಸರು ಬಂತು. ಆದ್ರೆ ನನ್ನ ಲೈಫ್ಗೆ ಸಾಲು ಸಾಲು ಬಿಗ್ ಬ್ರೇಕ್ ಕೊಟ್ಟಿದ್ದು ನಮ್ಮ ವಿಜಯ್ ಅಣ್ಣ” ‘ತೇರಿ’, ‘ಮೆರ್ಸಲ್’, ಮತ್ತು ‘ಬಿಗಿಲ್’ ತರಹದ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೆನಪಿಸಿಕೊಂಡು ವಿಜಯ್ಗೆ ಥ್ಯಾಂಕ್ಸ್ ಹೇಳಿದರು.
ಅಷ್ಟೇ ಅಲ್ಲದೆ, ಬಾಲಿವುಡ್ ಕಿಂಗ್ ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾ ಮಾಡೋ ಆಫರ್ ಬಂದಾಗ ನಡೆದ ಘಟನೆಯನ್ನೂ ಅಟ್ಲಿ ಹಂಚಿಕೊಂಡರು.
“ಶಾರುಖ್ ಸರ್ ನನ್ನ ಆಫೀಸ್ಗೆ ಬಂದು ಕಥೆ ಕೇಳಿ ಓಕೆ ಅಂದಾಗ, ನಾನು ವಿಜಯ್ ಅಣ್ಣನ ಹತ್ತಿರ ಹೋಗಿ ವಿಷಯ ಹೇಳಿದೆ. ಅದಕ್ಕೆ ವಿಜಯ್ ಅಣ್ಣ, ‘ನೋಡು ಅಟ್ಲಿ, ನೀನು ಏನ್ ಮಾಡ್ತಿಯೋ ಗೊತ್ತಿಲ್ಲ, ಮೊದಲು ನನ್ನ ಸುತ್ತ ಸುಳಿಯೋದನ್ನ ಬಿಟ್ಟು ಶಾರುಖ್ ಖಾನ್ ಸಿನಿಮಾ ಮಾಡು. ಆ ಸಿನಿಮಾ ನಿನ್ನ ಕರಿಯರ್ ಅನ್ನೇ ಬದಲಾಯಿಸುತ್ತೆ, ಹೋಗು!’ ಎಂದು ಬೆನ್ನು ತಟ್ಟಿ ಕಳುಹಿಸಿದ್ರು. ಅವರು ಅಂದ ಹಾಗೆಯೇ ‘ಜವಾನ್’ ನನ್ನ ಲೈಫ್ ಅನ್ನೇ ಚೇಂಜ್ ಮಾಡ್ತು. ಅದಕ್ಕೆಲ್ಲ ನಮ್ಮ ವಿಜಯ್ ಅಣ್ಣನೇ ಕಾರಣ” ಎಂದು ಅಟ್ಲಿ ನೆನೆದರು.
ಅಟ್ಲಿ ಅವರ ಈ ಮಾಸ್ ಮತ್ತು ಎಮೋಷನಲ್ ಸ್ಪೀಚ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು, ವಿಜಯ್ ಅಭಿಮಾನಿಗಳು ಇದನ್ನು ಟ್ರೆಂಡ್ ಮಾಡ್ತಿದ್ದಾರೆ.



