Friday, December 8, 2023

Latest Posts

SAFE PREGNANCY | ಗರ್ಭಿಣಿಯರೇ ಈ ತಪ್ಪುಗಳನ್ನು ಮಾಡಿದ್ರೆ ಮಗುವಿನ ಮೇಲೆ ನೇರ ಪರಿಣಾಮ!

ಗರ್ಭಿಣಿಯರ ಆರೋಗ್ಯ ಯಾವಾಗಲೂ ಸೂಕ್ಷ್ಮ. ಗರ್ಭಿಣಿಯಿದ್ದಾಗ ಮಾಡುವ ಕೆಲ ತಪ್ಪುಗಳಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಮಗುವಿಗೆ ಮುಂದೆ ಸಮಸ್ಯೆ ಆದಾಗ, ಗರ್ಭಿಣಿಯಿದ್ದಾಗ ನಾನು ಹೀಗೆ ಮಾಡಬಾರದಿತ್ತು ಎಂದುಕೊಂಡರೆ ಏನೂ ಉಪಯೋಗ ಇಲ್ಲ. ಹಾಗಾಗಿ ಈ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ನಿಲ್ಲಿಸಿಬಿಡಿ.

  1. ಧೂಮಪಾನ, ಮದ್ಯಪಾನ, ಡ್ರಗ್ಸ್
  2. ಹೆಚ್ಚು ಕೆಮಿಕಲ್ ಇರುವ ಸೌಂದರ್ಯವರ್ಧಕಗಳನ್ನು ಬಳಸುವುದು.
  3. ಕೆಮಿಕಲ್ ಇರುವ ಕ್ಲೀನರ್‌ಗಳನ್ನು ಬಳಸಿ ಮನೆ ಶುಚಿ ಮಾಡೋದು.
  4. ಜಂಕ್ ಫುಡ್, ಸ್ಟೋರ್ ಮಾಡಿರುವ ಆಹಾರ ಹಾಗೂ ಸಿಹಿತಿಂಡಿ ಹೆಚ್ಚು ತಿನ್ನೋದು.
  5. ಹೆಚ್ಚು ಕಾಫಿ ಸೇವನೆ
  6. ಹೇರ್ ಡೈ ಮಾಡುವುದು
  7. ಬಿಸಿಲಿನಲ್ಲಿ ಕೂರುವುದು, ಬಿಸಿ ನೀರಲ್ಲಿ ಹೆಚ್ಚು ಹೊತ್ತು ಸ್ನಾನ ಮಾಡುವುದು.
  8. ಹೆಚ್ಚು ವರ್ಕೌಟ್ ಅಥವಾ ವರ್ಕೌಟ್ ಮಾಡದೇ ಇರುವುದು.
  9. ಸರಿಯಾದ ರೀತಿ ಮಲಗದೇ ಇರುವುದು.
  10. ಬಯಕೆ ಹೆಸರಿನಲ್ಲಿ ಅನಾವಶ್ಯಕ ಆಹಾರಗಳನ್ನು ತಿನ್ನುವುದು.
  11. ಹಸಿವಾದರೂ ತಿನ್ನದೇ ಇರುವುದು.
  12. ವ್ಯಾಯಾಮ, ವಾಕ್ ಮಾಡದಿರುವುದು.
  13. ಅನಾರೋಗ್ಯದ ವ್ಯಕ್ತಿಗಳಿಂದ ದೂರ ಇರದೇ ಇರುವುದು.
  14. ಹೀಲ್ಸ್ ಧರಿಸುವುದು.
  15. ವೈದ್ಯರ ಕೇಳದೆ ಬೇರೆ ಮಾತ್ರೆಗಳನ್ನು ಕುಡಿಯುವುದು.
  16. ಭಾರ ಎತ್ತುವುದು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!