February 25, 2026
Wednesday, February 25, 2026
spot_img

TECH | ಯಾರಾದ್ರೂ ಕರೆ ಮಾಡಿ ಮಾತಾಡದೇ ಸೈಲೆಂಟ್‌ ಆಗಿದ್ರೆ ಅದು ನೆಟ್‌ವರ್ಕ್‌ ಸಮಸ್ಯೆ ಅಲ್ಲ! ಬಿಗ್‌ ಸ್ಕ್ಯಾಮ್‌ 🚨!

ನಿಮಗೆ ಗೊತ್ತೇ ಇಲ್ಲದ ಸಂಖ್ಯೆಯಿಂದ ಕರೆ ಬರುತ್ತದೆ. ನೀವು ರಿಸೀವ್‌ ಮಾಡ್ತೀರಿ. ಆ ಕಡೆಯಿಂದ ಯಾರೂ ಮಾತನಾಡೋದಿಲ್ಲ. ನೀವು ಒಂದೆರಡು ಸೆಕೆಂಡ್‌ ಕಾದು, ಹಲೋ, ಯಾರು? ಯಾರು? ಎಂದು ಕೇಳ್ತೀರಿ. ಹಿಂಬದಿಯಿಂದ ಮನೆಯಲ್ಲಿ ಯಾರಾದರೂ ಯಾರು? ಎಂದು ಕೇಳ್ತಾರೆ, ಯಾರೋ ಗೊತ್ತಿಲ್ಲ ಮಾತಾಡ್ತಾ ಇಲ್ಲ, ನೆಟ್‌ವರ್ಕ್‌ ಸಮಸ್ಯೆ ಇರಬೇಕು ಅಂತೀರಿ..

ಇಷ್ಟೇ ಸಾಕು ಹ್ಯಾಕರ್ಸ್‌ ಹಾಗೂ ಸ್ಕ್ಯಾಮರ್ಸ್‌ಗೆ! ನಿಮ್ಮ ದನಿಯನ್ನು ದುರ್ಬಳಕೆ ಮಾಡಿಕೊಂಡು ಹಣ ಕೀಳೋಕೆ..

ಒತ್ತಡದಲ್ಲಿ, ಮಾಮೂಲಿಯಾಗಿ ಹಲೋ ಎನ್ನುವ ನಿಮ್ಮ ಒಂದು ದನಿಯಿಂದ ಬರುವ ಒಂದು ಪದ ಸಾಕು, ಅದನ್ನು ರೆಕಾರ್ಡ್‌ ಮಾಡಿಕೊಂಡು ಎಐ ಬಳಕೆ ಮೂಲಕ ಯಾವ ರೀತಿಯಾದ್ರೂ ಬಳಕೆ ಮಾಡಿಕೊಳ್ತಾರೆ..

ಏನಾಗತ್ತೆ?
ನಿಮ್ಮ ಬಾಯಿಂದ ಹೊರಟ ಯಾವುದೇ ಶಬ್ದವನ್ನು ಸ್ಕ್ಯಾಮರ್ಸ್‌ ರೆಕಾರ್ಡ್‌ ಮಾಡುತ್ತಾರೆ. ಅಲ್ಲಿಗೆ ನಿಮ್ಮ ದನಿ ಅವರಿಗೆ ಸಿಕ್ಕಿದೆ. ಸಿಟ್ಟಿನ ದನಿ, ಅಳುವ ದನಿ, ಮಾಮೂಲಾಗಿ ಮಾತಾಡುವ ದನಿ ಎಲ್ಲವನ್ನೂ ಟೆಕ್ನಾಲಜಿ ಬಳಸಿ ಅವರು ರೆಡಿ ಮಾಡ್ಕೋತಾರೆ.

ನಿಮ್ಮ ಪ್ರೀತಿಪಾತ್ರರು, ನೆಂಟರಿಷ್ಟರು, ಇನ್ಸ್ಟಾಗ್ರಾಮ್‌ ಫ್ಯಾಮಿಲಿ ಇನ್ನಿತರ ಜನಕ್ಕೆ ಕರೆ ಅಥವಾ ವಾಯ್ಸ್‌ ನೋಟ್‌ ಮೂಲಕ ನಿಮ್ಮದೇ ದನಿಯಲ್ಲಿ, ದೊಡ್ಡ ಪ್ರಾಬ್ಲಮ್‌ ಆಗಿದೆ, ಈ ನಂಬರ್‌ಗೆ ಪ್ಲೀಸ್‌ ಇಷ್ಟು ಹಣ ಕೊಡಿ ಎಂದು ಮನವಿ ಮಾಡುತ್ತಾರೆ. ಪ್ರೀತಿಪಾತ್ರರು ಯಾಕೆ ಎಂದು ಕೇಳದೇ ತಕ್ಷಣವೇ ಹಣ ಕಳಿಸುತ್ತಾರೆ.

ಭಯದಲ್ಲಿ ಜನ ಲಾಜಿಕ್‌ ಮರೆತುಬಿಡುತ್ತಾರೆ. ನಮ್ಮವರಿಗೆ ತೊಂದರೆ ಆಗಿದೆ, ನಾನು ಅದಕ್ಕೆ ತಕ್ಕ ಸೊಲ್ಯೂಷನ್‌ ಕೊಡಬೇಕು ಎಂದು ಯೋಚಿಸದೇ ಮುಂದುವರಿಯುತ್ತಾರೆ.

ಏನು ಮಾಡಬಹುದು?
ಈ ರೀತಿ ಯಾವುದೇ ಕರೆ ಬಂದರೂ ಹಲೋ, ಯೆಸ್‌, ಹೇಳಿ, ಯಾರು ಯಾವ ಪದಗಳನ್ನೂ ಬಳಸಬೇಡಿ.

ನಿಜವಾದ ಫ್ಯಾಮಿಲಿಯೇ ಆದರೆ, ಯಾವುದೇ ಸಂಖ್ಯೆಯಿಂದ ಕರೆ ಮಾಡುವಾಗ ಒಂದು ಕೋಡ್‌ ವರ್ಡ್‌ ಶುರು ಮಾಡಿ. ಅದರಿಂದಲೇ ಮಾತು ಆರಂಭಿಸಿ. ನೀವೇ ಎಂದು ಕನ್ಫರ್ಮ್‌ ಆದಮೇಲೆ ಮಾತನಾಡಿ.

ಕರೆ ಬಂದಾಗ ಮಾತನಾಡಬೇಡಿ. ದುಡ್ಡು ಕೇಳಿದರೆ ತಕ್ಷಣ ವಿಡಿಯೋ ಕಾಲ್‌ಗೆ ಸ್ವಿಚ್‌ ಮಾಡಿ. ಈಗ ಕಳ್ಳರು ಫೋನ್‌ ಕದಿಯೋದಿಲ್ಲ, ಡೇಟಾ ಕದಿಯುತ್ತಾರೆ. ಜಾಗೃತರಾಗಿ. ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ, ವಯಸ್ಸಾದವರಿಗೆ ಈ ಬಗ್ಗೆ ಮಾಹಿತಿ ನೀಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !