ಬಿಜೆಪಿಯವರ ಮೇಲಿನ ಆರೋಪ ಸಾಬೀತಾದರೆ ಆ ದಿನವೇ ರಾಜಕೀಯವನ್ನು ತೊರೆಯುತ್ತೇನೆ: ಅಣ್ಣಾಮಲೈ ಸವಾಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮತದಾರರ ಮೇಲೆ ಪ್ರಭಾವ ಬೀರಲು ಡಿಎಂಕೆ ಮತ್ತು ಎಐಎಡಿಎಂಕೆ ಕೊಯಮತ್ತೂರಿನಲ್ಲಿ 1,000 ಕೋಟಿಗೂ ಹೆಚ್ಚು ಖರ್ಚು ಮಾಡಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಮತ್ತು ಕೊಯಮತ್ತೂರು ಅಭ್ಯರ್ಥಿ ಕೆ. ಅಣ್ಣಾಮಲೈ ಆರೋಪಿಸಿದ್ದಾರೆ.

ಕರೂರಿನ ಉತ್ತುಪಟ್ಟಿಯಲ್ಲಿನ ಮತಗಟ್ಟೆಯಲ್ಲಿ ವೋಟ್​ ಮಾಡಿದ ನಂತರ ಮಾತನಾಡಿದ ಅವರು,ಬಿಜೆಪಿಯ ವ್ಯಕ್ತಿಯೊಬ್ಬರು ತಮ್ಮ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವ ಯಾವುದೇ ವ್ಯಕ್ತಿಯನ್ನು ವಿರೋಧ ಪಕ್ಷಗಳು ಕರೆತರಲು ಸಾಧ್ಯವಾದರೆ, ಅವರು ಆ ದಿನವೇ ರಾಜಕೀಯವನ್ನು ತೊರೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಕೊಯಮತ್ತೂರಿನಲ್ಲಿ ಡಿಎಂಕೆ, ಎಐಎಡಿಎಂಕೆ ನಾಯಕರು ಏನು ಮಾಡುತ್ತಿದ್ದಾರೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಕೊಯಮತ್ತೂರಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ 1,000 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿವೆ. ಆದರೆ, ಬಿಜೆಪಿಯವರು ತಮ್ಮ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾರಾದರೂ ಒಬ್ಬ ಮತದಾರನನ್ನು ಮಾಧ್ಯಮದ ಮುಂದೆ ಕರೆತಂದು ಹೇಳಿಸಿದ್ರೆ, ನಾನು ಅದೇ ದಿನ ರಾಜಕೀಯವನ್ನು ತೊರೆಯುತ್ತೇನೆ. ಏಕೆಂದರೆ, ನಾನು ಈ ಚುನಾವಣೆಯಲ್ಲಿ ನಿಯಮದ ಪ್ರಕಾರ ಸ್ಪರ್ಧೆ ಮಾಡಿದ್ದೇನೆ ಎಂದು ಅಣ್ಣಾಮಲೈ ಹೇಳಿದರು.

ಹಣದಿಂದ ಜನರನ್ನು ಖರೀದಿಸಬಹುದು ಎಂದು ಡಿಎಂಕೆ ಭಾವಿಸುತ್ತದೆ. ಎಐಎಡಿಎಂಕೆ ಕೂಡ ಅದೇ ದೋಣಿಯಲ್ಲಿ ಸಾಗಿದೆ. ಕೊಯಮತ್ತೂರಿನಲ್ಲಿ ಕಳೆದ 2-3 ದಿನಗಳಿಂದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ನಮ್ಮ ಜನರು ಪದೇ ಪದೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!