ನೇಹಾ ಹತ್ಯೆ ಪ್ರಕರಣ: ಆರೋಪಿಯನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸುವಂತೆ ಆಗ್ರಹ

ಹೊಸದಿಗಂತ ವರದಿ, ಕಲಬುರಗಿ:

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಕ್ಯಾಂಪಸ್ ಗೆ ನುಗ್ಗಿ ಹಾಡುಹಗಲೇ ಹಿಂದು ಯುವತಿಯಾದ ನೇಹಾ ಹಿರೇಮಠ ಅವರನ್ನು ಕಗ್ಗೋಲೆ ಮಾಡಿದ ಜಿಹಾದಿ ಮನಸ್ಸುಳ್ಳ ಫಯಾಜ್,ನನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಶುಕ್ರವಾರ ಸಂಜೆ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.

ನಗರದಲ್ಲಿ ಪಾದಯಾತ್ರೆಯ ಮೂಲಕ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಹಿಂಜಾವೇ ಜಿಲ್ಲಾ ಸಂಚಾಲಕ ನಾಗೇಂದ್ರ ಕಾಬಡೆ, ಹಿಂದೂ ಯುವತಿ ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣವನ್ನು ಎನ್.ಐ.ಗೆ. ತನಿಖೆ ಮಾಡಲು ಒಳಪಡಿಸಿ ಜಿಹಾದಿ ಫಯಾಜ್ ನನ್ನು ಶೀಘ್ರದಲ್ಲೇ ವಿಚಾರಣೆ ನಡೆಸಿ ತ್ವರಿತ ನ್ಯಾಯಾಲಯ ಮೂಲಕ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಾದ್ಯಂತ ಕಳೆದ ಕೆಲ ವರ್ಷಗಳಿಂದ ಲವ್ ಜಿಹಾದ್ ಹೆಸರಿನಲ್ಲಿ ಮತಾಂಧ ಮುಸ್ಲಿಂ ಜಿಹಾದಿಗಳಿಂದ ನಡೆದ ಅನೇಕ ಕ್ರೂರ ಹತ್ಯೆ, ನೂರಾರು ಯುವತಿಯರ ಕೊಲೆ ಪ್ರಕರಣ, ಸಾವಿರಾರು ಹಿಂದೂ ಯುವತಿಯರ ಅಪಹರಣ ಮತ್ತು ಲಕ್ಷಾಂತರ ಯುವತಿಯರಿಗೆ ಕಿರುಕುಳ, ಬ್ಲ್ಯಾಕ್ ಮೇಲ್ ಘಟನೆಗಳು ನಡೆದರೂ ಈ ಮತಾಂಧರಿಗೆ ಕಡಿವಾಣ ಹಾಕಲು ಆಡಳಿತ ಯಾವುದೇ ಕಾನೂನು ಕೂಡ ಜಾರಿಗೆ ಮಾಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಕೂಡಲೇ ಹಿಂದೂ ಯುವತಿ ನೇಹಾ ಹಿರೇಮಠ ಹತ್ಯೆ ಮಾಡಿದ ಪ್ರಕರಣವನ್ನು ಎನ್ ಐ ಎ ಗೆ ವಹಿಸುವ ಮೂಲಕ ತ್ವರಿತವಾಗಿ ನ್ಯಾಯಾಲಯ ಮೂಲಕ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ ಅವರು, ಈ ಲವ್ ಜಿಹಾದ್ ಕುರಿತು ಆಡಳಿತ ನಡೆಸುತ್ತಿರುವ ಸರ್ಕಾರ, ನಿರ್ಲಕ್ಷ್ಯ ತೋರಿದ್ದಲ್ಲಿ ಸ್ವತಃ ಹಿಂದೂ ಸಮಾಜವೇ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು,ಈ ಜಿಹಾದಿಗಳ ಮರ್ದನಕ್ಕೆ ನಿಲ್ಲುವ ಕಾಲ ದೂರವಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸುಧಾ ಹಾಲಕಾಯಿ, ಗಿರಿರಾಜ್ ಯಳಮೇಲಿ, ಸಿದ್ದಯ್ಯ ಮಠಪತಿ, ನಾಗಯ್ಯ ಸ್ವಾಮಿ, ಸಿದ್ದರಾಜ ಬಿರಾದಾರ, ಆಕಾಶ, ಶಶಿಧರ, ಅಖಿಲೇಶ, ನಾಗೇಶ, ರಾಹುಲ್ ಪೇಂಟರ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!