ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ವಿರೋಧ ಪಕ್ಷದ ಗದ್ದಲದ ನಡುವೆ ಈ ಮಸೂದೆಯನ್ನು ಮಂಡಿಸಲಾಯಿತು.
ಇಂದಿನ ವಕ್ಫ್ ಮಂಡಳಿಯ ಕಾರ್ಯವೈಖರಿಯ ವಿರುದ್ಧ ಕಠಿಣ ನಿಲುವನ್ನು ವ್ಯಕ್ತಪಡಿಸಿದ ಕಿರಣ್ ರಿಜಿಜು, “ನಾವು ಮಸೂದೆಯನ್ನು ಮಂಡಿಸದಿದ್ದರೆ ಸಂಸತ್ತಿನ ಕಟ್ಟಡವನ್ನೂ ವಕ್ಫ್ ಆಸ್ತಿ ಎಂದು ಹೇಳಿಕೊಳ್ಳುತ್ತಿದ್ದರು” ಎಂದು ಟೀಕಿಸಿದ್ದಾರೆ.
“ನಾನು ಜಂಟಿ ಸಂಸದೀಯ ಸಮಿತಿಯ ಎರಡೂ ಸದನಗಳ ಸದಸ್ಯರನ್ನು ಅಭಿನಂದಿಸಲು ಬಯಸುತ್ತೇನೆ. ಒಟ್ಟಾರೆಯಾಗಿ, 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ವಕ್ಫ್ ಮಂಡಳಿಗಳ 284 ನಿಯೋಗಗಳು ಜೆಪಿಸಿಯಲ್ಲಿ ತಮ್ಮ ಸಲ್ಲಿಕೆಗಳನ್ನು ನೀಡಿವೆ” ಎಂದು ತಿಳಿಸಿದ್ದಾರೆ.