ದೇಶಕ್ಕೆ ಪ್ರಬಲನಾಯಕ ಇಲ್ಲದಿದ್ದರೇ ಅಫ್ತಾಬ್ ನಂತಹ ಹಂತಕ ಪ್ರತಿ ನಗರದಲ್ಲೂ ಹುಟ್ಟುತ್ತಾರೆ: ಅಸ್ಸಾಂ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶಕ್ಕೆ ಒಬ್ಬ ಪ್ರಬಲ ನಾಯಕ ಇಲ್ಲದಿದ್ದರೇ ಅಫ್ತಾಬ್ ಅಮೀನ್ ಪೂನಾವಾಲನಂತಹ ಹಂತಕರು ಪ್ರತಿ ನಗರದಲ್ಲೂ ಹುಟ್ಟುತ್ತಾರೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

ಗುಜರಾತ್ ಚುನಾವಣಾ ಪ್ರಚಾರ ಸಭೆಯ ಭಾಗವಾಗಿ ಕಚ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿ ಮಾಡುವುದು ಪ್ರಸ್ತುತ ಈ ದೇಶದ ತುರ್ತು ಅಗತ್ಯ. ಇಲ್ಲವಾದರೆ ದೇಶದಲ್ಲಿ ಪ್ರಬಲ ನಾಯಕನಿಲ್ಲದಿದ್ದರೆ, ಅಫ್ತಾಬ್‌ನಂತಹ ಹಂತಕರು ಪ್ರತಿ ನಗರದಲ್ಲೂ ಹುಟ್ಟುತ್ತಾರೆ. ಆಗ ನಮ್ಮ ಸಮಾಜ ರಕ್ಷಿಸಲು ಸಾಧ್ಯವಾಗುವುದಿಲ್ಲ ಹೇಳಿದ್ದಾರೆ.

ಕೊಲೆ ಪ್ರಕರಣದ ಭೀಕರತೆಗಳನ್ನು ವಿಚಾರಸಿದಾಗ ಇದನ್ನು ಲವ್ ಜಿಹಾದ್ (Love Jihad) ಪ್ರಕರಣ ಎನ್ನಲಾಗಿದೆ. ಅಲ್ಲದೆ ಹಿಂದೂ ಮಹಿಳೆಯರು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಮುಂಬೈನಿಂದ ಶ್ರದ್ಧಾಳನ್ನು ಕರೆದುಕೊಂಡು ಬಂದಿದ್ದ ಅಫ್ತಾಬ್ 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ. ಇದೇ ಸಮಯದಲ್ಲಿ ಮತ್ತೊಬ್ಬ ಮಹಿಳೆಯನ್ನು ಕರೆತಂದು ಲೈಂಗಿಕ ಸಂಪರ್ಕ ಮಾಡಿದ್ದಾನೆ. ಇಂತಹ ಕೃತ್ಯಗಳಿಂದ ದೇಶವನ್ನು ರಕ್ಷಿಸಬೇಕಾದರೆ ನಮ್ಮ ದೇಶಕ್ಕೆ ಶಕ್ತಿಯುತ ನಾಯಕನನ್ನು ಹೊಂದಿರಬೇಕು, ರಾಷ್ಟ್ರವನ್ನು ತಮ್ಮ ತಾಯಿ ಎಂದು ಪರಿಗಣಿಸುವವರಾಗಿರಬೇಕು. ಹಾಗಾಗಿ 2024ರಲ್ಲಿ 3ನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ಬಹಳ ಮುಖ್ಯ ಎಂದು ಕರೆ ನೀಡಿದ್ದಾರೆ.

ಬಿಜೆಪಿ ಖಂಡಿತವಾಗಿ ಮುಸ್ಲಿಂ ಮಹಿಳೆಯರನ್ನು ಗೌರವಿಸುತ್ತದೆ . ಮೋದಿ ಅವರ ನಾಯಕತ್ವದಲ್ಲಿಯೇ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಕ್‌ನಂತ ಕ್ರೂರ ಅಭ್ಯಾಸಗಳಿಮದ ಸ್ವಾತಂತ್ರ್ಯ ಪಡೆದುಕೊಂಡರು. ನರೇಂದ್ರ ಮೋದಿಯವರು ಏನೇ ಕೆಲಸ ಮಾಡಿದರೂ ಅದನ್ನು ಶಾಂತಿಯುತವಾಗಿ ಮಾಡಿದ್ದಾರೆ. ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಲಾಯಿತು, ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಲಾಯಿತು. ಎಲ್ಲವೂ ಸುಸೂತ್ರವಾಗಿ ನಡೆಯಿತು ಮತ್ತು ಯಾವುದೇ ಗೊಂದಲವಿಲ್ಲ. ಈಗ ನೀವೆಲ್ಲಾ ತಾಳ್ಮೆಯಿಂದಿರಿ, ಏಕರೂಪ ನಾಗರಿಕ ಸಂಹಿತೆ ಕೂಡ ಬರುತ್ತದೆ ಮತ್ತು ನಾಲ್ಕು ಮದುವೆಗಳನ್ನು ಮಾಡಿಕೊಳ್ಳುವ ಅಭ್ಯಾಸವನ್ನೂ ಕೊನೆ ಮಾಡುತ್ತೇವೆ ಎಮದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!