August 30, 2026
Sunday, August 30, 2026
spot_img

ಡ್ಯಾಮ್‌ ತುಂಬಿದ್ರೆ ನೀರನ್ನು ಹಿಡಿದಿಟ್ಟುಕೊಳ್ಳೋದಕ್ಕೆ ಆಗೋದಿಲ್ಲ: ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಆರ್‌ಎಸ್‌ ಡ್ಯಾಂನಲ್ಲಿ ನೀರು ತುಂಬಿದ್ರೆ ಅದನ್ನು ಹಿಡಿದಿಟ್ಟುಕೊಳ್ಳೋಕೆ ಆಗೋದಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡುತ್ತೀವಿ ಎಂದು ಹೇಳಿದ್ದಾರೆ. ಡ್ಯಾಮ್‌ ತುಂಬಿದ್ರೆ ನೀರನ್ನು ಹಾಗೇ ಇಟ್ಕೊಳೋಕೆ ಆಗೋದಿಲ್ಲ ಬಿಡಲೇಬೇಕಾಗುತ್ತದೆ ಎನ್ನುವುದು ಮಾತಿನ ಅರ್ಥವಾಗಿದೆ.

ನಾವು ನೀರು ಬಿಟ್ಟಿಲ್ಲ, ಆದರೆ ಮಳೆಯಾಗ್ತಿದೆ. ಒಂದು ಡ್ಯಾಂ ಮತ್ತೆ ತುಂಬೋ ಹಂತಕ್ಕೆ ಬಂದಿದೆ. ನಾಳೆ ಸರ್ವ ಪಕ್ಷ ಸಭೆ ಕರೆದಿದ್ದೇನೆ. ಬಿಜೆಪಿ ಅವರೇ ಸರ್ವಪಕ್ಷ ಸಭೆಗೆ ಸಲಹೆ ಕೊಟ್ಟಿದ್ದು, ಅದನ್ನ ಮಾಡಿದ್ದೇನೆ. ಅದನ್ನ ನಾನು ಮಾಡಿದ್ದೇನೆ. ತಮಿಳುನಾಡಿನವರು ಸುಪ್ರೀಂ ಕೋರ್ಟ್ ಗೆ ಹೋಗ್ತಾರೆ ಅಂತ ಗೊತ್ತಾಯ್ತು. ನೋಡೋಣ ಇಂದು ಸಾಯಂಕಾಲ ಮತ್ತೊಂದು ಡ್ಯಾಂ ತುಂಬಬಹುದು, ನೀರನ್ನ ನಾವೇನು ತಡೆಹಿಡಿಯೋಕೆ ಆಗಲ್ಲ, ನಾಳಿನ ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನು ಸರ್ವಪಕ್ಷ ಸಭೆಗೆ ಬಿಜೆಪಿ ಟೀಕೆ ವಿಚಾರ ಕುರಿತು ಮಾತನಾಡಿ, ಸರ್ವಪಕ್ಷ ಸಭೆಗೆ ಸಲಹೆ ಕೊಟ್ಟಿದ್ದೇ ಬಿಜೆಪಿಯವರು. ಈಗ ಅವ್ರೇ ಆರೋಪ ಮಾಡ್ತಾರೆ ಮಾಡಲಿ, ಇನ್ನೂ ನೀರು ಬಿಟ್ಟಿಲ್ಲ. ಸಂಜೆ ಅಷ್ಟೋತ್ತಿಗೆ ಒಂದು ಡ್ಯಾಂ ತುಂಬುವ ಸ್ಥಿತಿಯಲ್ಲಿ ಇದೆ. ಡ್ಯಾಂ ತುಂಬಿದ್ರೆ ನೀರನ್ನ ನಾವು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ ಅಂತಲೂ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !