ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಸೈಟು ವಿಚಾರದಲ್ಲಿ ತಂದೆ, ತಾಯಿ ಇಬ್ಬರಿಗೂ ಬೇಸರ ಆಗಿದೆ. ಹಾಗಂತ ಹೆದರಿ ಕೂರುವುದಿಲ್ಲ, ಬಿಜೆಪಿ ಕುತಂತ್ರದ ವಿರುದ್ಧ ಹೋರಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ನನ್ನ ತಂದೆಯ 40 ವರ್ಷದ ರಾಜಕೀಯ ಜೀವನದಲ್ಲಿ ಯಾವತ್ತೂ ಈ ರೀತಿ ಕಳಂಕ ಬಂದಿರಲಿಲ್ಲ. ವಿನಾಃಕಾರಣ ಅವರ ಹೆಸರು ಕೆಡಿಸಲು ಸುಳ್ಳು ಸೃಷ್ಟಿಸಿದ್ದಾರೆ. ಭ್ರಷ್ಟಾಚಾರ ಆರೋಪ ಮಾಡ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ. ಸುಖಾಸುಮ್ಮನೆ ಆರೋಪ ಮಾಡುವವರನ್ನು ಹಾಗೇ ಬಿಡೋದಕ್ಕೆ ಆಗೋದಿಲ್ಲ. ಅಕ್ರಮ ಎಂದು ಪ್ರೂವ್ ಮಾಡಲಿ ಸೈಟ್ ವಾಪಾಸ್ ನೀಡುತ್ತೇವೆ ಎಂದು ಹೇಳಿದ್ದಾರೆ.