ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಶೀಘ್ರದಲ್ಲಿಯೇ ಶುರು ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರತಿ ಬಾರಿ ಅಕ್ಟೋಬರ್ ತಿಂಗಳಲ್ಲಿ ಶೋ ಆರಂಭವಾಗುತ್ತದೆ. ಈ ಬಾರಿ ಅದೇ ರೀತಿ ಪ್ಲ್ಯಾನ್ ಮಾಡಲಾಗುತ್ತಿದೆ.
ತೆರೆಮರೆಯಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ನಡೀತಿದೆ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗುತ್ತಿದೆ. ಇದೀಗ ನಟಿ ಜ್ಯೋತಿ ರೈ,ʻ ಕನ್ನಡ ಬಿಗ್ ಬಾಸ್‌ನಿಂದ ನನಗೆ ಕರೆ ಬಂದಿದ್ದು ನಿಜಾ. ಆದರೆ ನನಗೆ ಈ ಬಾರಿ ಬರೋದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಕನ್ನಡದ ಸಾಕಷ್ಟು ಸೀರಿಯಲ್‌ಗಳಲ್ಲಿ ನಟಿ ಜ್ಯೋತಿ ರೈ ಅಭಿನಯ ಮಾಡಿದ್ದಾರೆ. ಸದ್ಯ ಜ್ಯೋತಿ ಬಿಗ್‌ಬಾಸ್‌ಗೆ ಬಂದೇ ಬರುತ್ತದೆ ಎಂದುಕೊಂಡ ಫ್ಯಾನ್ಸ್‌ಗೆ ನಿರಾಸೆಯಾಗಿದೆ.