May 10, 2026
Sunday, May 10, 2026
spot_img

ಆಟ ಆಡೋಕೆ ಆಗದಿದ್ರೆ ನಿವೃತ್ತಿಯಾಗಿಬಿಡಿ: ಟೀಮ್ ಇಂಡಿಯಾ ಹಿರಿಯ ಆಟಗಾರನ ಪ್ರದರ್ಶನಕ್ಕೆ ಫ್ಯಾನ್ಸ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜಿಂಕ್ಯ ರಹಾನೆ ಹೆಸರು ಕೇಳಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿನ ಅವರ ಶಾಂತ ಆಟ ನೆನಪಾಗುತ್ತದೆ. ಆದರೆ ವೇಗದ ಆಟಕ್ಕೆ ಹೆಸರಾಗಿರುವ ಐಪಿಎಲ್‌ನಲ್ಲಿ ಈಗ ಅವರ ಪ್ರದರ್ಶನವೇ ಪ್ರಶ್ನೆಗಳ ಕೇಂದ್ರವಾಗಿದೆ. ಅನುಭವದ ಬಲದಿಂದ ತಂಡದಲ್ಲಿ ಸ್ಥಾನ ಉಳಿಸಿಕೊಂಡರೂ, ಬ್ಯಾಟ್‌ನಿಂದ ನಿರೀಕ್ಷಿತ ಕೊಡುಗೆ ಸಿಗದಿರುವುದು ಟೀಕೆಗೆ ಕಾರಣವಾಗಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವದ ಜವಾಬ್ದಾರಿ ಹೊತ್ತಿರುವ ರಹಾನೆ, ಈ ಋತುವಿನಲ್ಲಿ ಕೆಲವು ಪಂದ್ಯಗಳಲ್ಲಿ ಮಾತ್ರ ಮಿಂಚಿದ್ದು, ಉಳಿದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ನಾಯಕನಾಗಿ ತಂಡವನ್ನು ಮುನ್ನಡೆಸುವ ಜೊತೆಗೆ ಬ್ಯಾಟ್ಸ್‌ಮನ್ ಆಗಿಯೂ ಹೆಚ್ಚು ಪರಿಣಾಮಕಾರಿ ಆಟದ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ:

ತಂಡದ ಬೆಂಚ್‌ನಲ್ಲಿ ಸ್ಫೋಟಕ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುವಾಗ, ಅನುಭವಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂಬ ಚರ್ಚೆಯೂ ಜೋರಾಗಿದೆ. ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ಅಭಿಮಾನಿಗಳ ವಲಯದಲ್ಲೂ ಕೇಳಿಬರುತ್ತಿವೆ.

ಐಪಿಎಲ್‌ನಲ್ಲಿ ಹೆಸರು ಅಥವಾ ಅನುಭವಕ್ಕಿಂತ ಪ್ರಸ್ತುತ ಫಾರ್ಮ್‌ಗೇ ಹೆಚ್ಚಿನ ಬೆಲೆ ಇದೆ. ಮುಂದಿನ ಕೆಲವು ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ದೊಡ್ಡ ಇನ್ನಿಂಗ್ಸ್ ಆಡದಿದ್ದರೆ, ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !