ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಗೆ ಬಾಲಿವುಡ್‌ನಿಂದ ಮದುವೆ ಆಫರ್ ಬಂದಿದೆ.
ಹೌದು, ಬಾಲಿವುಡ್ ನಟಿ ಪಾಯಲ್ ಘೋಷ್ ಶಮಿ ಅವರನ್ನು ಮದುವೆಯಾಗುವುದಾಗಿ ಹೇಳಿದ್ದಾರೆ.
ಶಮಿ ನೀವು ಸ್ವಲ್ಪ ಇಂಗ್ಲಿಷ್ ಕಲಿತುಬಿಟ್ರೆ ನಿಮ್ಮನ್ನು ಮದುವೆಯಾಗೋದಕ್ಕೆ ನಾನು ರೆಡಿ ಎಂದು ಪಾಯಲ್ ಟ್ವೀಟ್ ಮಾಡಿದ್ದಾರೆ.
ನಿಜವಾಗಿಯೂ ಹೇಳಿದ್ದಾರೋ ಅಥವಾ ಪಬ್ಲಿಸಿಟಿಗಾಗಿ ಹೀಗೆಲ್ಲಾ ಮಾತನಾಡ್ತಿದ್ದಾರೋ ಅಭಿಮಾನಿಗಳಿಗೆ ಕನ್ಫ್ಯೂಸ್ ಆಗಿದೆ. ಈ ಹಿಂದೆ ಕೂಡ ಪಾಯಲ್ ಸೆಮಿಫೈನಲ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡೋಕೆ ನನ್ನಿಂದ ಏನು ಸಹಕಾರ ಬೇಕು ಹೇಳಿ, ನೀವು ಹೀರೋ ಆಗೋದನ್ನು ನಾನು ನೋಡಬೇಕು ಎಂದು ಹೇಳಿದ್ದರು.