COVID UPDATE | ಮಾಸ್ಕ್ ಹಾಕದಿದ್ರೆ ಮೆಟ್ರೋ ಪ್ರವೇಶ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಸೋಂಕು ಹರಡದಂತೆ ತಡೆಗಟ್ಟಲು ಮೆಟ್ರೋ ನಿಲ್ದಾಣದಲ್ಲಿ ಮಾಸ್ಕ್ ಮತ್ತೆ ಕಡ್ಡಾಯವಾಗಿದೆ.
ಮಾಸ್ಕ್ ಧರಿಸದವರಿಗೆ ಮೆಟ್ರೊ ನಿಲ್ದಾಣದಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಕೊರೋನಾ ನಿಯಮ ಪಾಲನೆಗೆ ಸರ್ಕಾರ ಮುಂದಾಗಿದ್ದು, ಭದ್ರತಾ ಸಿಬ್ಬಂದಿ ಮಾಸ್ಕ್ ಹಾಕದವರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ.

ಈಗಲೂ ಕೆಲವರು ಕೊರೋನಾ ಹಾವಳಿ ಕಡಿಮೆಯಾಗಿದ್ದರೂ ಮಾಸ್ಕ್ ಧರಿಸುವುದನ್ನು ಬಿಟ್ಟಿರಲಿಲ್ಲ. ಮಾಸ್ಕ್ ಇಲ್ಲದೆ ಓಡಾಡುತ್ತಿದ್ದವರು ಇದೀಗ ಮಾಸ್ಕ್ ಖರೀದಿಗೆ ಮುಂದಾಗಿದ್ದಾರೆ. ಮೆಟ್ರೊ ನಿಲ್ದಾಣಗಳ ಬಳಿ ಮಾಸ್ಕ್ ಮಾರಾಟ ಆರಂಭವಾಗಿದೆ.

ಈ ಹಿಂದೆ ಕೊರೋನಾ ಅಲೆಯಲ್ಲಿ ಮೆಟ್ರೋದಲ್ಲಿ ಮಾಸ್ಕ್ ಕಡ್ಡಾಯವಾಗಿತ್ತು. ಸ್ವಲ್ಪ ಸಮಯಕ್ಕೆ ಮಾಸ್ಕ್ ತೆಗೆದರೂ ದಂಡ ಬೀಳುತ್ತಿತ್ತು. ಈಗಲೂ ಮತ್ತದೇ ಪರಿಸ್ಥಿತಿ ಎದುರಾಗಿದ್ದು, ಮಾಸ್ಕ್ ಧರಿಸಿ ಓಡಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!