ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ನಿಂಬೆಹಣ್ಣು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಉದ್ದಿನಬೇಳೆ
ಸಬಸಿಗೆ
ಕೊತ್ತಂಬರಿ ಸೊಪ್ಪು
ತುಪ್ಪ
ರವೆ
ಕಾಯಿತುರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಹಸಿಮೆಣಸು ಹಾಕಿ ಬಾಡಿಸಿ
ನಂತರ ಇದಕ್ಕೆ ಈರುಳ್ಳಿ ಹಾಕಿ, ಉಪ್ಪು ಹಾಕಿ, ಈರುಳ್ಳಿ ಬೆಂದ ನಂತರ ಸಬಸಿಗೆ ಸೊಪ್ಪು ಹಾಕಿ
ಆಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ
ಈ ರೆಸಿಪಿಯಲ್ಲಿ ನೀರು ಎಷ್ಟು ಹಾಕುತ್ತೀವಿ ಅನ್ನೋದೇ ಮುಖ್ಯ ಅಂಶವಾಗಿದೆ, ಒಂದು ಲೋಟ ರವೆ ಹಾಕುವುದಾದರೆ ಅದಕ್ಕೆ ಐದು ಲೋಟ ನೀರು ಹಾಕಿ
ಸಣ್ಣ ರವೆ ಹಾಗೂ ಚಿರೋಟಿ ರವೆ ಬೆಸ್ಟ್
ಐದು ಲೋಟ ನೀರು ಹಾಕಿ ಕುದಿಸಿ, ಕುದಿ ಬಂದ ನಂತರ ಸ್ವಲ್ಪ ನಿಂಬೆಹುಳಿ, ತುಪ್ಪ ಹಾಕಿ, ಕಾಯಿತುರಿ ಉದುರಿಸಿ
ನಂತರ ರವೆ ಹಾಕಿ ಮಿಕ್ಸ್ ಮಾಡಿ, ಒಂದೆರಡು ನಿಮಿಷ ಮುಚ್ಚಿ ಬೇಯಿಸಿದ್ರೆ ಉಪ್ಪಿಟ್ಟು ರೆಡಿ



