ಪ್ರೀತಿಸುವ ಜಾಣೆ ಸಿಕ್ಕರೆ ಮದುವೆ ಆಗೋಕೆ ರೆಡಿ, ಎಲ್ಲಿ ಸಿಗ್ತಾರೆ ಅಂಥ ಹುಡುಗಿ? ರಾಗಾ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ್ ಜೋಡೋ ಯಾತ್ರೆಯಲ್ಲಿರೋ ರಾಹುಲ್ ಗಾಂಧಿ ಕರ್ಲಿ ಟೇಲ್ಸ್‌ಗೆ ಸಂದರ್ಶನವೊಂದನ್ನು ನೀಡಿದ್ದಾರೆ.

ಇಲ್ಲಿ ತಾವು ಮದುವೆಯಾಗುವ ಹುಡುಗಿ, ಇಷ್ಟದ ಆಹಾರದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಮದುವೆಯಾಗಬಾರದು ಅಂತೆಲ್ಲಾ ಏನೂ ಇಲ್ಲ, ಪ್ರೀತಿಸುವ ಜಾಣೆ ಸಿಕ್ಕರೆ ಮದುವೆಯಾಗ್ತೀನಿ. ನನ್ನ ತಂದೆ-ತಾಯಿ ಪ್ರೀತಿಯನ್ನು ಕಣ್ಣಾರೆ ನೋಡಿದ್ದೇನೆ, ನನ್ನ ನಿರೀಕ್ಷೆ ಸ್ವಲ್ಪ ಜಾಸ್ತಿನೇ ಇದೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಚಿಕನ್, ಫಿಶ್, ಮಟನ್ ಸಿಕ್ಕಾಪಟ್ಟೆ ಇಷ್ಟ, ಖಾರದ ಫುಡ್ ಆಗೋದಿಲ್ಲ, ನಾನು ಪರ್ಟಿಕ್ಯುಲರ್ ಎಂದು ರಾಗಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!