ಸಾಮಾಗ್ರಿಗಳು
ಶುಂಠಿ
ಬೆಳ್ಳುಳ್ಳಿ
ಮೈದಾ ಅಥವಾ ಕಾರ್ನ್‌ಫ್ಲೋರ್
ಎಣ್ಣೆ
ಮಾಡುವ ವಿಧಾನ
ಮೊದಲು ಬೆಳ್ಳುಳ್ಳಿಯನ್ನು ಕತ್ತರಿಸಿ ಅದಕ್ಕೆ ಮೈದಾ ಅಥವಾ ಕಾರ್ನ್‌ಫ್ಲೋರ್ ಹಾಕಿ ಚೆನ್ನಾಗಿ ಕಲಸಿ. ಈ ರೀತಿ ಮಾಡೋದ್ರಿಂದ ಬೆಳ್ಳುಳ್ಳಿಯ ಸಿಪ್ಪೆ ಹೊರಕ್ಕೆ ಬರುತ್ತದೆ.
ಆನಂತರ ಶುಂಠಿಯ ಸಿಪ್ಪೆಯನ್ನು ತೆಗೆದು ಸಣ್ಣಗೆ ಕತ್ತರಿಸಿ
ನಂತರ ಮಿಕ್ಸಿಗೆ ತೊಳೆದ ಬೆಳ್ಳುಳ್ಳಿ, ಶುಂಠಿ ಹಾಗೂ ಅಡುಗೆಯ ಎಣ್ಣೆ ಹಾಕಿ ರುಬ್ಬಿ
ಈ ರೀತಿ ಎಣ್ಣೆ ಹಾಕುವುದರಿಂದ ಪೇಸ್ಟ್ ಆರು ತಿಂಗಳಾದ್ರೂ ಕೆಡೋದಿಲ್ಲ.



