ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಪ್ರಧಾನಿ ಮೋದಿ ಅವರು, ಹಾಗಾಗಿ ನನ್ನನ್ನು ವಿರೋಧಿಸಿದ್ರೆ ಅವರನ್ನೇ ವಿರೋಧಿಸಿದಂತೆ ಎಂದು ನೂತನ ರಾಜ್ಯ ಬಿಜೆಪಿ ಮುಖ್ಯಸ್ಥ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಸಚಿವ ಪ್ರಹ್ಲಾದ್ ಜೋಶಿ, ಬಿ.ಎಲ್ ಸಂತೋಷ್ ಅವರು ಮೊದಲು ಕರೆ ಮಾಡಿ ಅಭಿನಂದನೆ ಕೋರಿದ್ದಾರೆ. ವಿ. ಸೋಮಣ್ಣ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿ ಮಾಡಿ ನಾನೇ ಮಾತನಾಡುತ್ತೇನೆ. ಯಾರಾದರೂ ನನ್ನನ್ನು ವಿರೋಧಿಸಿದರೆ ಪ್ರಧಾನಿ ಮೋದಿ ಅವರನ್ನೂ ವಿರೋಧಿಸಿದಂತೆ.
ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ಯಾರು? ಯಡಿಯೂರಪ್ಪನಾ? ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನನ್ನನ್ನು ಆಯ್ಕೆ ಮಾಡಿದ್ದಾರೆ. ರಾಜ್ಯದ ಎಲ್ಲಾ 28 ಸೀಟುಗಳನ್ನು ಗೆಲ್ಲುವುದಷ್ಟೇ ನನ್ನ ಗುರಿ ಎಂದಿದ್ದಾರೆ.