ವಿನಯದಿಂದ ಚಹಾ ಕೇಳಿದ್ರೆ ಸಿಕ್ಕಾಪಟ್ಟೆ ವಿನಾಯಿತಿ, ‘ಪ್ಲೀಸ್ ಚಹಾ ಕೊಡಿ’ ಅಂತ ಕೇಳ್ತೀರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ಕೆಲಸವನ್ನು ಧಿಮಾಕಿನಿಂದ ಮಾಡೋಕೆ ಹೇಳಿದರೆ ಯಾರೂ ಕೇಳುವುದಿಲ್ಲ. ಅದೇ ವಿನಯವಾಗಿ ಹೇಳಿದರೆ ಎಲ್ಲರೂ ಮಾಡಿಕೊಡುತ್ತಾರೆ.

ಅದು ಸರ್ವೀಸ್ ಸೆಕ್ಟಾರ್ ಇರಬಹುದು, ನೀವೇ ಯಾವುದಾದರೂ ಹೊಟೇಲ್‌ಗೆ ಹೋಗಿ ರೋಪ್ ಹಾಕುವ ಬದಲು ಪ್ಲೀಸ್ ಇದನ್ನು ಕೊಡಿ ಎಂದರೆ ನಿಮಗೂ ಗೌರವ. ಅವರಿಗೂ ಗೌರವ, ಇದೇ ಥೀಮ್‌ನಲ್ಲಿ ಯುಕೆಯ ಪ್ರೆಸ್ಟನ್ ದೇಸಿ ಚಾಯ್ ಕೆಫೆ ಕೆಲಸ ಮಾಡುತ್ತಿದೆ.

ಇಲ್ಲಿ ಚಹಾ ಆರ್ಡರ್ ಮಾಡುವವರಿಗೆ ಮೂರು ರೀತಿ ಮೆನ್ಯು ಇದೆ. ದೇಸಿ ಚಾಯ್ 5 ಡಾಲರ್, ದೇಸಿ ಚಾಯ್ ಪ್ಲೀಸ್ 3 ಡಾಲರ್, ಹೆಲೋ, ದೇಸಿ ಚಾಯ್ ಪ್ಲೀಸ್ ಎಂದರೆ 1.90 ಡಾಲರ್‌ಗೆ ಚಹಾ ಸಿಗಲಿದೆ.

ಈ ಮೆನ್ಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಭೇಷ್ ಎಂದಿದ್ದಾರೆ. ಕೆಲವರು ಹೊಟೇಲ್‌ಗಳಲ್ಲಿ ಸರ್ವೀಸ್ ನೀಡುವವರನ್ನು ಸರಿಯಾಗಿ ನಡೆಸಿಕೊಳ್ಳೋದಿಲ್ಲ. ಇಂಥವರಿಗೆ ಇಲ್ಲಿ ಚಹಾ ದುಬಾರಿಯಾಗಿದೆ. ವಿನಯದಿಂದ ಕೇಳಿದವರಿಗೆ ಹಣ ಕಡಿಮೆಯಾಗಿದೆ. ಇದೊಂಥರಾ ಉತ್ತಮ ರೀತಿಯ ಮಾರ್ಕೆಟಿಂಗ್ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!