ಜಯಲಲಿತಾ ಸಾವು ಪ್ರಕರಣ: ಶಶಿಕಲಾ ನಟರಾಜನ್ ಸಹಿತ ಮೂವರ ವಿರುದ್ಧ ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ನಟರಾಜನ್ ಸೇರಿದಂತೆ ಮೂವರ ವಿರುದ್ಧ ತನಿಖೆಗೆ ನ್ಯಾ.ಆರ್ಮುಗಸ್ವಾಮಿ ಆಯೋಗ ಆದೇಶ ನೀಡಿದೆ.

ತಮಿಳುನಾಡು ವಿಧಾನಸಭೆಯಲ್ಲಿ ನ್ಯಾ.ಆರ್ಮುಗಸ್ವಾಮಿ ಆಯೋಗದ ತನಿಖಾ ವರದಿ ಮಂಡನೆಯಾಗಿದ್ದು, ಜಯಲಲಿತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ನಟರಾಜನ್, ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್, ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಹಾಗೂ ವೈದ್ಯ ಶಿವಕುಮಾರ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಜಯಲಲಿತಾ ಸಾವಿನ ಪ್ರಕರಣದ ವಿಚಾರಣೆಗಾಗಿ ನ್ಯಾ.ಆರ್ಮುಗಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಇದೀಗ ಸಮಿತಿಯು ತನಿಖೆಗೆ ಆದೇಶಿಸಿ ವರದಿ ಮಂಡನೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!