KITCHEN TIPS | ಅನ್ನ ಮುದ್ದೆಯಾಗದೇ ಉದುರುದುರಾಗಬೇಕಾದರೆ ಹೀಗೆ ಮಾಡಿ..

ಕೆಲವೊಮ್ಮೆ ನೀರು ಹಾಕುವುದರಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ ಅನ್ನ ಉದುರಾಗುವುದಿಲ್ಲ, ಇದು ಬರೀ ಅನ್ನಕ್ಕಷ್ಟೇ ಅಲ್ಲ, ಪಲಾವ್ ಟೊಮ್ಯಾಟೊ ಬಾತ್ ಹೀಗೆ ಕುಕ್ಕರ್‌ನಲ್ಲಿ ಮಾಡುವ ರೈಸ್‌ಗೆ ಅನ್ವಯವಾಗುತ್ತದೆ. ಅನ್ನ ಉದುರುದುರಾಗಬೇಕಾದರೆ ಹೀಗೆ ಮಾಡಿ..

  • ಕುಕ್ಕರ್‌ನಲ್ಲಿ ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರು ಮೇಲೆ ಸ್ವಲ್ಪ ನೀರು ಹಾಕಿ ಜಾಸ್ತಿ ನೀರು ಹಾಕಿದರೆ ಅನ್ನ ಮುದ್ದೆಯಂತಾಗುತ್ತದೆ.
  • ಕುಕ್ಕರ್‌ನಲ್ಲಿ ಅಕ್ಕಿ ನೀರು ಹಾಕಿದಮೇಲೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿದರೆ ಅನ್ನ ಹಳಿಹಳಿಯಾಗಿರುತ್ತದೆ.
  • ರೈಸ್‌ಬಾತ್‌ಗಳಿಗೆ ಕಾಯಿ ರುಬ್ಬಿ ಹಾಕುವಾಗ ಕಾಯಿಯ ಪ್ರಮಾಣ ತುಂಬಾ ಕಡಿಮೆ ಇರಲಿ, ಕಾಯಿ ಹೆಚ್ಚಿದ್ದಷ್ಟು ರೈಸ್ ಮುದ್ದೆಯಾಗುತ್ತದೆ.
  • ಸಣ್ಣ ಉರಿಯಲ್ಲಿ ಅನ್ನ ಅಥವಾ ಬಾತ್ ಬೇಯಿಸಿದರೆ ಉದುರಾಗುತ್ತದೆ.
  • ಕುಕ್ಕರ್‌ನ ಪ್ರೆಶರ್ ಸಂಪೂರ್ಣ ಆರುವವೆಗೂ ಕುಕ್ಕರ್ ತೆರೆಯಬೇಡಿ
  • ಕುಕ್ಕರ್ ತೆರೆದ ತಕ್ಷಣ ಅನ್ನಕ್ಕೆ ಕೈ ಆಡಿ ಮಿಕ್ಸ್ ಮಾಡಬೇಡಿ ತಣ್ಣಗಾದರೆ ಅನ್ನ ಉದುರಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!