32 ವರ್ಷಗಳ ಕೊಲೆ ಪ್ರಕರಣಕ್ಕೆ ದೊರೆತ ಜಯ: ಮಾಫಿಯಾ ಡಾನ್ ದೋಷಿ ಎಂದ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಫಿಯಾ ಡಾನ್, ರಾಜಕಾರಣಿ ಮತ್ತು ದರೋಡೆಕೋರ ಮುಕ್ತಾರ್ ಅನ್ಸಾರಿಯನ್ನು ಹತ್ಯೆ ಪ್ರಕರಣವೊಂದರಲ್ಲಿ ವಾರಣಾಸಿ ಎಂಪಿ ಎಂಎಲ್ಎ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.

1991ರ ಆಗಸ್ಟ್‌ 3ರಂದು ಕಾಂಗ್ರೆಸ್‌ ಮುಖಂಡನನ್ನು ಹತ್ಯೆ ಮಾಡಿದ ಆರೋಪ ಅವರ ಮೇಲಿದೆ. ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರಾಯ್ ಅವರ ಸಹೋದರ ಅವಧೇಶ್ ರಾಯ್ ಅವರನ್ನು ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 32 ವರ್ಷಗಳ ಹಿಂದಿನ ಈ ಕೊಲೆ ಪ್ರಕರಣದಲ್ಲಿ ಇದೀಗ ನ್ಯಾಯಾಲಯ ಅನ್ಸಾರಿಯನ್ನು ದೋಷಿ ಎಂದು ಘೋಷಿಸಿದೆ. ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಅನ್ಸಾರಿ ಈಗಾಗಲೇ ಅಪಹರಣ ಮತ್ತು ಕೊಲೆ ಪ್ರಕರಣಗಳಲ್ಲಿ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣಗಳಲ್ಲಿ ನ್ಯಾಯಾಲಯವು ಏಪ್ರಿಲ್ ತಿಂಗಳಲ್ಲಿ ಶಿಕ್ಷೆ ವಿಧಿಸಿತ್ತು. ಇದಲ್ಲದೇ ಈತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಐದು ಬಾರಿ ಶಾಸಕರಾಗಿದ್ದ ಅನ್ಸಾರಿ 1991ರಲ್ಲಿ ರಾಜಕೀಯದಲ್ಲಿ ಫೇಮಸ್ ಆಗುತ್ತಿದ್ದ ಪ್ರಕರಣವೊಂದರಲ್ಲಿ ಕಾಂಗ್ರೆಸ್ ನಾಯಕ ಅವಧೇಶ್ ರಾಯ್ ಅವರನ್ನು ಕೊಲೆ ಮಾಡಿದ್ದರು. ಕೊಲೆಯಾದ ಸಂದರ್ಭದಲ್ಲಿ ಅನ್ಸಾರಿ ಶಾಸಕರಾಗಿರಲಿಲ್ಲ. ಈ ಸಂದರ್ಭದಲ್ಲಿ ಅನ್ಸಾರಿ ಅವರೊಂದಿಗೆ ಭೀಮ್ ಸಿಂಗ್ ಮತ್ತು ಮಾಜಿ ಶಾಸಕ ಅಬ್ದುಲ್ ಕಲೀಂ ಎಫ್‌ಐಆರ್‌ನಲ್ಲಿ ಹೆಸರುಗಳನ್ನೂ ಸೇರಿಸಲಾಗಿದೆ. ಸಿಬಿಸಿಐಡಿ ಪ್ರಕರಣದ ತನಿಖೆ ನಡೆಸಿತ್ತು. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಕೇಸ್ ಡೈರಿ ಜೂನ್ 2022 ರಲ್ಲಿ ಕಣ್ಮರೆಯಾಯಿತು. ಫೋಟೋ ಪ್ರತಿಗಳ ಆಧಾರದ ಮೇಲೆ ಇಡಿ ಪ್ರಕರಣದ ತನಿಖೆ ನಡೆಸಿತು. ನಕಲು ಪತ್ರಗಳ ಆಧಾರದ ಮೇಲೆ ತೀರ್ಪು ನೀಡಿದ್ದು, ಅನ್ಸಾರಿಯನ್ನು ದೋಷಿ ಎಂದು ತೀರ್ಪು ಪ್ರಕಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!