April 3, 2026
Friday, April 3, 2026
spot_img

HEALTH | ವಿಟಮಿನ್ A,C ಎಲ್ಲ ಸಿಗ್ಬೇಕು ಅಂದ್ರೆ ಸೀಸನ್‌ನಲ್ಲಿ ಸಿಗೋ ಸಪೋಟ ತಿಂದುಬಿಡಿ

ಸೀಸನ್‌ನಲ್ಲಿ ಯಾವೆಲ್ಲ ಹಣ್ಣುಗಳು ಸಿಗುತ್ತದೆಯೋ ಆ ಹಣ್ಣುಗಳನ್ನು ಹೇರಳವಾಗಿ ತಿಂದುಬಿಡಬೇಕು. ಸಮ್ಮರ್‌ ಸೀಸನ್‌ನಲ್ಲಿ ಸಿಗುವ ಸಪೋಟ ಹಣ್ಣಿನ ರುಚಿಗೆ ಮನಸೋಲದವರಿಲ್ಲ. ಯಾವ ಹಣ್ಣಿನ ಜೊತೆ ಮಿಕ್ಸ್‌ ಮಾಡಿಕೊಂಡು ತಿಂದರೂ ಸಪೋಟ ಹೈಲೈಟ್‌ ಆಗುತ್ತದೆ. ಇದನ್ನು ಯಾಕೆ ತಿನ್ನಬೇಕು? ಇಲ್ಲಿದೆ ಡೀಟೇಲ್ಸ್‌..

ಇದರಲ್ಲಿ ವಿಟಮಿನ್‌ ಸಿ ಮತ್ತು ಎ ಹೇರಳವಾಗಿದೆ.

ಸುಸ್ತು, ಎನರ್ಜಿಯೇ ಇಲ್ಲ ಅಂದ್ರೆ ಒಂದು ಸಪೋಟ ತಿಂದುಬಿಡಿ. ತಕ್ಷಣವೇ ನಿಮಗೆ ಎನರ್ಜಿ ಸಿಗುತ್ತದೆ.

ನಿಮ್ಮ ಬಿಪಿಯನ್ನು ಇದು ಕಂಟ್ರೋಲ್‌ನಲ್ಲಿ ಇಡುತ್ತದೆ. ಕೆಮ್ಮೆ, ಶೀತ ಇದ್ದರೆ ಇದೇ ಬೆಸ್ಟ್‌ ಫ್ರೂಟ್‌

ನರ್ವಸ್‌ ಸಿಸ್ಟಮ್‌ನ್ನು ಚೆನ್ನಾಗಿ ಇಡುತ್ತದೆ. ಆರೋಗ್ಯಕರ ಮೂಳೆಗಳು ನಿಮ್ಮದಾಗುತ್ತವೆ.

ಒತ್ತಡವನ್ನು ದೂರ ಮಾಡಿ ಮೂಡ್‌ ಚೆನ್ನಾಗಿ ಆಗುವಂತೆ ಮಾಡುತ್ತದೆ. ನಿಮ್ಮ ಕೂದಲು ಡ್ರೈ ಆಗಿದ್ದರೆ ಇದನ್ನು ತಿನ್ನಿ.

ಇದರಲ್ಲಿ ಹೆಚ್ಚು ಫೈಬರ್‌ ಇರುವ ಕಾರಣ ಜೀರ್ಣ ಚೆನ್ನಾಗಿ ಆಗುತ್ತದೆ. ಹೊಟ್ಟೆಯ ಆರೋಗ್ಯಕ್ಕೆ ಬೆಸ್ಟ್‌.

ದೇಹದಲ್ಲಿರುವ ಕೊಳೆಯ ಅಂಶಗಳನ್ನು ಹೊರಗೆ ಹಾಕುತ್ತದೆ. ಸ್ಕಿನ್‌ ಹಾಗೂ ಕೂದಲಿಗೆ ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !