September 11, 2026
Friday, September 11, 2026
spot_img

ಶಾಪಿಂಗೂ ಆಗ್ಬೇಕು ಹಾಗೆ ದುಡ್ಡು ಕೂಡ ಉಳಿಬೇಕು ಅಂದ್ರೆ ಈ ಐದು ಟಿಪ್ಸ್‌ ಫಾಲೋ ಮಾಡಿ

ಈಗಿನ ಜನರೇಷನ್‌ನಲ್ಲಿ ಶಾಪಿಂಗ್‌ ಇಷ್ಟಪಡದವರು ಯಾರಿದ್ದಾರೆ ಹೇಳಿ? ಪ್ರತಿಯೊಬ್ಬರಿಗೂ ಶಾಪಿಂಗ್‌ ಮಾಡೋಕೆ ಇಷ್ಟ ಆದರೆ ದುಬಾರಿ ವಸ್ತುಗಳನ್ನು ಕೊಳ್ಳೋದಕ್ಕೆ ಸ್ವಲ್ಪ ಕಷ್ಟ. ಅದೇ ನಮ್ಮ ಬಜೆಟ್‌ನಲ್ಲಿ ಇದ್ದಿದ್ದರೆ ಎಂದು ಮನಸ್ಸಿನಲ್ಲಿ ಅಂದುಕೊಳ್ತಾರೆ. ನಿಮಗೆ ಶಾಪಿಂಗ್‌ ಕೂಡ ಆಗಬೇಕು ಹಾಗೇ ತುಂಬಾ ದುಡ್ಡೂ ಖರ್ಚಾಗಬಾರದು ಅಂದ್ರೆ ಕೆಲವೊಂದು ಟಿಪ್ಸ್‌ ತಿಳಿದುಕೊಳ್ಳಬೇಕು.

ವರ್ಷದಲ್ಲಿ ಎರಡು ಬಾರಿ ಎಲ್ಲ ಅಂಗಡಿಗಳಲ್ಲಿಯೂ ಸೇಲ್‌ ಹಾಕುತ್ತಾರೆ. ಜೂನ್‌ ಅಥವಾ ಜುಲೈ, ಡಿಸೆಂಬರ್‌ ಅಥವಾ ಜನವರಿಯಲ್ಲಿ ಸಾಮಾನ್ಯವಾಗಿ ಸೇಲ್‌ಗಳು ನಡೆಯುತ್ತವೆ. ನಾಲ್ಕೈದು ತಿಂಗಳು ಏನನ್ನೂ ತೆಗೆದುಕೊಳ್ಳದೇ ಆಫರ್‌ ಇರುವ ಸಮಯದಲ್ಲಿ ಮಾತ್ರ ಚೆನ್ನಾಗಿ ಶಾಪಿಂಗ್‌ ಮಾಡ್ಕೊಳಿ. ಈ ಸಮಯದಲ್ಲಿ 80%ವರೆಗೂ ದುಡ್ಡು ಕಡಿಮೆ ಹಾಗೂ ಕ್ಯಾಶ್‌ಬ್ಯಾಕ್‌ ಆಫರ್‌ಗಳು ಹೆಚ್ಚಿರುತ್ತವೆ. ಅಂಗಡಿಗಳಲ್ಲಿ ಕೊಳ್ಳೋಕೆ ಹೋಗುವಾಗ ಸಾಧ್ಯವಾದಷ್ಟು ವೀಕೆಂಡ್‌ ಅವಾಯ್ಡ್‌ ಮಾಡಿ. ವೀಕ್‌ದಿನದ ಮಧ್ಯಾಹ್ನ ಬೆಸ್ಟ್‌ ಟೈಮ್‌.

ನೀವು ಆನ್‌ಲೈನ್‌ ಶಾಪಿಂಗ್‌ ಮಾಡೋರಾದರೂ ಕೂಡ ಆಫರ್‌ ಡೇಟ್‌ಗಳನ್ನು ನೋಡಿಕೊಳ್ಳಿ. ಅದಕ್ಕೆ ಮುನ್ನ ನಿಮಗೆ ಬೇಕಿರುವ ಪದಾರ್ಥಗಳನ್ನು ವಿಶ್‌ಲಿಸ್ಟ್‌ನಲ್ಲಿ ಇಟ್ಟುಕೊಳ್ಳಿ. ತದನಂತರ ತಕ್ಷಣ ಆರ್ಡರ್‌ ಮಾಡಿಕೊಳ್ಳಿ. ಸೇಲ್‌ ಸಮಯದಲ್ಲಿ ನಿಮ್ಮಿಷ್ಟದ ಬಟ್ಟೆಗಳು ಔಟ್‌ ಆಫ್‌ ಸ್ಟಾಕ್‌ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಶಾಪಿಂಗ್‌ ಹೋಗುವ ಮೊದಲು ನಿಮ್ಮ ಕಬೋರ್ಡ್‌ ಒಮ್ಮೆ ನೋಡಿಕೊಳ್ಳಿ. ಅವಶ್ಯಕತೆ ಇರುವ ಬಟ್ಟೆಗಳನ್ನು ಮಾತ್ರ ಖರೀದಿ ಮಾಡೋದು ನೀವು ಮಾಡಬಹುದಾದ ಬಹುದೊಡ್ಡ ಸೇವಿಂಗ್ಸ್‌ ಆಗಿದೆ. ಬಟ್ಟೆ ಅಂಗಡಿಯ ಲೈಟಿಂಗ್ಸ್‌ನಲ್ಲಿ ನೀವು ಹಾಕುವ ಪ್ರತೀ ಬಟ್ಟೆಯೂ ಅದ್ಭುತವಾಗಿಯೇ ಕಾಣಿಸುತ್ತದೆ. ಆದರೆ ನಿಜವಾಗಿಯೂ ಅವಶ್ಯಕತೆ ಇದೆಯಾ? ನಾನು ಈ ಬಟ್ಟೆಯನ್ನು ಒಂದು ವರ್ಷವಾದ್ರೂ ಹಾಕಿಕೊಳ್ತೀನಾ ಎಂದು ಆಲೋಚಿಸಿ ನಂತರ ಶಾಪಿಂಗ್‌ ಮಾಡಿ.

ಶಾಪಿಂಗ್‌ ಮಾಡಲೇಬೇಕು ಎನ್ನುವ ಮನಸ್ಥಿತಿಯಲ್ಲಿ ಹೊರಡಬೇಡಿ. ಏನಾದರೂ ಇಷ್ಟವಾದರೆ ಮಾತ್ರ ಖರೀದಿ ಮಾಡಿ. ಇನ್ನು ಹೊಟ್ಟೆ ಹಸಿವಾಗಿದ್ದ ಫುಡ್‌ ಮಾರ್ಟ್‌ಗಳ ಕಡೆ ಹೋಗಬೇಡಿ. ಶಾಪಿಂಗ್‌ಗೆ ಹೊರಡುವಾಗ ಊಟ ಮಾಡಿ, ನೀರು ತುಂಬಿಕೊಂಡು ಹೊರಡಿ. ಇದರಿಂದ ಸಾಕಷ್ಟು ಹಣ ಉಳಿತಾಯ ಆಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !