ಹೊಸದಿಗಂತ, ಮಂಗಳೂರು:
ಭಾರೀ ಸದ್ದು ಮಾಡಿರುವ ಧರ್ಮಸ್ಥಳ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಸ್ ಐಟಿಗೆ ನೀಡಿರುವ ಗಡುವು ಹತ್ತಿರವಾಗುತ್ತಿದ್ದಂತೆಯೇ ತನಿಖೆ ವಿವಿಧ ಆಯಾಮಗಳಲ್ಲಿ ಇನ್ನಷ್ಟು ಚುರುಕು ಪಡೆದುಕೊಂಡಿದೆ.
ಸೌಜನ್ಯಾ ಪ್ರಕರಣದಲ್ಲಿ ಮೊದಲು ಆರೋಪಿಯಾಗಿ ಗುರುತಿಸಲಾಗಿದ್ದ ಸಂತೋಷ್ ರಾವ್‌ನ ವೈದ್ಯಕೀಯ ತಪಾಸಣೆ ನಡೆಸಿದ್ದ ಡಾ. ಮಹಾಬಲ ಶೆಟ್ಟಿಯನ್ನು ಎಸ್ ಐಟಿ ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದೆ.
ಮಂಗಳೂರಿನ ಹಳೆ ಜಿಲ್ಲಾಧಿಕಾರಿ ಕಚೇರಿಯ ಎಸ್ ಐಟಿ ಕಚೇರಿಯಲ್ಲಿ ಅಧಿಕಾರಿಗಳು ಡಾ.ಮಹಾಬಲ ಶೆಟ್ಟಿ ಅವರನ್ನು ಸಮಗ್ರ ವಿಚಾರಣೆ ನಡೆಸಿದ್ದಾರೆ.
ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಾ. ಮಹಾಬಲ ಶೆಟ್ಟಿ, ಎಸ್‌ಐಟಿ ವಿಚಾರಣೆ ಹಾಗೂ ಈ ಪ್ರಕರಣದ ಕುರಿತು ಏನೂ ಮಾತನಾಡುವುದಿಲ್ಲ. ನನ್ನನ್ನು ವಿಚಾರಣೆಗೆ ಏಕೆ ಕರೆದಿದ್ದಾರೆ ಇತ್ಯಾದಿ ಏನೇ ಪ್ರಶ್ನೆಗಳಿದ್ದರೂ ಎಸ್‌ಐಟಿ ಅಧಿಕಾರಿಗಳನ್ನೇ ಕೇಳಿ ಎಂದಷ್ಟೆ ಪ್ರತಿಕ್ರಿಯಿಸಿದರು.
ಸಂತೋಷ್ ರಾವ್ ಕುರಿತ ಪ್ರಶ್ನೆಗೆ, ಅದು ಕೋರ್ಟ್‌ನಲ್ಲಿ ಮುಗಿದ ವಿಚಾರ. ಮತ್ತೆ ಸಂತೋಷ್ ರಾವ್‌ನನ್ನು ಯಾಕೆ ಎಳೆಯುತ್ತಿದ್ದೀರಿ ಎಂದು ಹೇಳಿ ತೆರಳಿದರು.
ಇದೇ ವೇಳೆ ಆಸ್ಪತ್ರೆಯ ವಾಡ್೯ ಬಾಯ್ ಆಗಿದ್ದ ವ್ಯಕ್ತಿಯೋರ್ವನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.



