ಇಲ್ಲಿ ಇಂಡೋ ಪಾಕ್ ಪಂದ್ಯ ವೀಕ್ಷಿಸಿದರೆ ಬೀಳುತ್ತೆ 5,000 ರೂ. ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ಆರಂಭವಾಗಲು ಕೌಂಟ್‌ಡೌನ್ ಶುರುಗೊಂಡಿದ್ದು, ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಎಲ್ಲಾ ತಯಾರಿ ಮಾಡಿಕೊಂಡು ಟಿವಿ ಮುಂದ ಕುಳಿತಿದ್ದಾರೆ.
ಆದರೆ ಇತ್ತ ಇಂಡೋ ಪಾಕ್ ಪಂದ್ಯವನ್ನು ನೋಡಬಾರದು. ಒಂದು ವೇಳೆ ಆದೇಶ ಉಲ್ಲಂಘಿಸಿ ನೋಡಿದರೆ 5,000 ರೂಪಾಯಿ ದಂಡ ಹಾಕಲಾಗುತ್ತದೆ. ಇಷ್ಟೇ ಅಲ್ಲ ಪಂದ್ಯದ ಕುರಿತು ಯಾವುದೇ ಕಮೆಂಟ್ ಮಾಡಿದರೂ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ಬಂದಿದೆ.
ಇದು ಬಂದಿರುವುದು ಜನರಿಗೆ ಅಲ್ಲ ಬದಲಾಗಿ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ನೀಡಿರುವ ಆದೇಶ.
ಹೌದು , ಕಾಶ್ಮೀರದ ಶ್ರೀಗನರದಲ್ಲಿರುವ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(NIT) ಕಾಲೇಜು ಆಡಳಿತ ಮಂಡಳಿ ಈ ಆದೇಶ ಹೊರಡಿಸಿದೆ. ಭಾನುವಾರ ಆಗಿರುವ ಕಾರಣ ವಿದ್ಯಾರ್ಥಿಗಳಿಗೆ ನೀಡಿರುವ ಹಾಸ್ಟೆಲ್ ರೂಂ ಬಿಟ್ಟು ಹೊರಗೆ ಬರುವಂತಿಲ್ಲ. ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳ ಕೋಣೆ ಪ್ರವೇಶಿಸಿ ಪಂದ್ಯ ನೋಡುವಂತಿಲ್ಲ ಎಂದು ಆಡಳಿತ ಮಂಡಳಿ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಕಾಲೇಜು ವಿದ್ಯಾರ್ಥಿಗಳು ಯಾವುದೇ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸುತ್ತೋಲೆಯಲ್ಲಿ ಹೇಳಿದೆ. ನಿಮಯ ಉಲ್ಲಂಘಿಸಿದರೆ ದಂಡದ ಜೊತೆಗೆ ಕಾಲೇಜಿನಿಂದ ಡಿಬಾರ್ ಮಾಡಲಾಗುವುದು ಎಂದು ಡೀನ್ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ಕಾಲೇಜು ವಿದ್ಯಾರ್ಥಿಗಳು ಗುಂಪಾಗಿ ನೋಡುವಂತಿಲ್ಲ. ತಮ್ಮ ತಮ್ಮ ಹಾಸ್ಟೆಲ್‌ ರೂಂನಲ್ಲೇ ವಿದ್ಯಾರ್ಥಿಗಳು ಇರಬೇಕು. ಇತರರ ಕೋಣೆಯೊಳಗೆ ವಿದ್ಯಾರ್ಥಿಗಳು ಪ್ರವೇಶಿಸಿ ಗುಂಪಾಗಿ ಪಂದ್ಯ ನೋಡುವಂತಿಲ್ಲ. ಇನ್ನು ಪಂದ್ಯದ ಕುರಿತು ಯಾವುದೇ ಪ್ರತಿಕ್ರಿಯೆ, ಅಭಿಪ್ರಾಯ, ಕಮೆಂಟ್ ಹಾಕುವಂತಿಲ್ಲ. ಪಂದ್ಯ ಮುಗಿದ ಬಳಿಕ ವಿದ್ಯಾರ್ಥಿಗಳು ಹಾಸ್ಟೆಲ್ ಬಿಟ್ಟು ಹೊರಬರುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ 5,000 ರೂಪಾಯಿ ದಂಡ ಹಾಗೂ ಕಾಲೇಜಿನಿಂದ ಡಿಬಾರ್ ಮಾಡಲಾಗುತ್ತದೆ.
ಈ ಆದೇಶಕ್ಕೆ ಮುಖ್ಯ ಕಾರಣ ಈ ಹಿಂದಿನ ಟೀಂ ಇಂಡಿಯಾ ಪಂದ್ಯವನ್ನು ವೀಕ್ಷಿಸಿದ ಬಳಿಕ ಕಾಲೇಜು ವಿದ್ಯಾರ್ಥಿಗಳು ಹಲವು ಘೋಷಣೆಗಳನ್ನು ಕೂಗಿದ್ದಾರೆ. ಭಾರತ ವಿರೋಧಿ ಘೋಷಣೆ, ಎದುರಾಳಿ ತಂಡದ ಪರ ಘೋಷಣೆ ಕೂಗಿದ ವಿಡಿಯೋ ವೈರಲ್ ಆಗಿತ್ತು. ಇದರಿಂದ ದಾರು ದಾಖಲಾಗಿತ್ತು. ಹೀಗಾಗಿ ಮುನ್ನೆಚ್ಚರಿಕೆ ವಹಿಸಿರುವ ಆಡಳಿತ ಮಂಡಳಿ ಗುಂಪಾಗಿ ಪಂದ್ಯ ನೋಡದಂತೆ ತಾಕೀತು ಮಾಡಿದೆ. ಆದರೆ ಕಾಲೇಜು ಹಾಸ್ಟೆಲ್‌ನಲ್ಲಿ ಒಬ್ಬರೆ ಪಂದ್ಯ ವೀಕ್ಷಿಸಲು ಅವಕಾಶ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!