ಸದಾ ಆರೋಗ್ಯವಾಗಿರುವ ಮಕ್ಕಳು ಏನೂ ಮಾಡದೇ ಏನೂ ಹೊರಗಿನದ್ದು ತಿನ್ನದೆ ಇದ್ದಕ್ಕಿದ್ದಂತೆಯೇ ಅನಾರೋಗ್ಯಕ್ಕೆ ತುತ್ತಾಗ್ತಿದ್ದಾರಾ? ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ದೃಷ್ಟಿ ತೆಗೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ಅವರ ಆರೋಗ್ಯ ಕಾಪಾಡೋಕೆ ಸಹಾಯ ಮಾಡುತ್ತದೆ.
ಉಪ್ಪು
ಕೈಯಲ್ಲಿ ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ಮಕ್ಕಳ ಸುತ್ತ ನಿವಾಳಿಸಿ ಒಂದು ಪಾತ್ರೆಗೆ ಹಾಕಿ, ನೀರು ಹಾಕಿ ಇಡಿ
ಮರುದಿನ ಆ ನೀರನ್ನು ಮೂರು ದಾರಿ ಕೂಡುವ ಜಾಗಕ್ಕೆ ಹಾಕಿ.
ಬೆಳ್ಳುಳ್ಳಿ ಹಾಗೂ ಮೆಣಸಿನಕಾಯಿ
ಮಗುವಿನ ಬೆಳವಣಿಗೆ ಕುಂಠಿತವಾಗುತ್ತಿದ್ದರೆ ಅಥವಾ ನಿಮ್ಮ ಮಗುವಿನ ಮೇಲೆ ಕೆಟ್ಟ ದೃಷ್ಟಿಯಿದ್ದರೆ ಆಗ ನೀವು ಉಪ್ಪು, ಈರುಳ್ಳಿ ಸಿಪ್ಪೆ, ಬೆಳ್ಳುಳ್ಳಿ, ಸಾಸಿವೆ ಮತ್ತು ಒಣ ಕೆಂಪು ಮೆಣಸಿನಕಾಯಿ ಇವುಗಳಿಂದ ದೃಷ್ಟಿಯನ್ನು ತೆಗೆಯಿರಿ. ಇವುಗಳನ್ನು ಮುಷ್ಠಿಯಲ್ಲಿ ಹಿಡಿದು ಮಗುವಿನ ತಲೆಯ ಮೇಲೆ 7 ಬಾರಿ ಸುಳಿದು ಬೆಂಕಿಯಲ್ಲಿ ಅವುಗಳನ್ನು ಸುಟ್ಟುಹಾಕಿ. ಸುಟ್ಟ ಮೇಲೆ ಯಾವುದೇ ವಾಸನೆ ಇಲ್ಲದಿದ್ದರೆ, ಮಗುವಿನ ಮೇಲೆ ಕೆಟ್ಟ ದೃಷ್ಟಿ ಪ್ರಭಾವ ಬೀರಿದೆ ಎಂದು ಅರ್ಥಮಾಡಿಕೊಳ್ಳಿ.
ಮೊಟ್ಟೆ
ಒಂದು ಊದಿನಕಡ್ಡಿ ತೆಗೆದುಕೊಂಡು ಬೆಂಕಿ ಹೊತ್ತಿಸಿ. ಮೊಟ್ಟೆಗೆ ಅರಿಶಿಣ ಕುಂಕುಮ ಹಚ್ಚಿ. ಊದಿನಕಡ್ಡಿಯಿಂದ ಬೆಳಗಿ. ಕಪ್ಪು ಮಸಿಯನ್ನು ಮಕ್ಕಳಿಗೆ ಬೊಟ್ಟಿನ ರೀತಿ ಇಡಿ. ನಂತರ ಮೊಟ್ಟೆಯಿಂದ ಮಕ್ಕಳಿಗೆ ಮೂರು ಬಾರಿ ನಿವಾಳಿಸಿ. ಮೂರು ದಾರಿ ಕೂಡುವ ರಸ್ತೆಯಲ್ಲಿ ಮೊಟ್ಟೆಯನ್ನು ಒಡೆದು ಹಿಂದೆ ತಿರುಗಿ ನೋಡದಂತೆ ಮನೆಗೆ ಬನ್ನಿ.



