September 14, 2026
Monday, September 14, 2026
spot_img

ರಸ್ತೆಯಲ್ಲಿ ಹೋಗುವಾಗ ಮೈಮೇಲೆ ಬಿದ್ದ ಕೇಬಲ್‌ ವೈರ್‌: ಹುಬ್ಬಳ್ಳಿಯಲ್ಲಿ ಇಬ್ಬರ ದಾರುಣ ಸಾ*ವು

ಹೊಸದಿಗಂತ ವರದಿ ಹುಬ್ಬಳ್ಳಿ:

ಇಲ್ಲಿಯ ಗೋಕುಲ ರಸ್ತೆಯ ಅರ್ಬನ್ ಓಯಸಿಸ್ ಮಾಲ್ ಹತ್ತಿರ ಬೈಕ್ ರಸ್ತೆ ಅಪಘಾತವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ತಾಜನಗರ ನಿವಾಸಿಗಳಾದ ಮೀಜಮುಲ್ಲಾ ಮುಲ್ಲಾ(25), ಫಯಾಜ್ ಭಾಗವಾನ(18) ಮೃತಪಟ್ಟವರು. ರಾತ್ರಿ ಗೋಕುಲ ರಸ್ತೆ ವಿಮಾನ ನಿಲ್ದಾಣದಿಂದ ಹೊಸೂರ ಕಡೆ ಬರುತ್ತಿದ್ದರು. ಮಳೆ ಗಾಳಿ ಕೇಬಲ್ ವಾಯರ್ ತುಂಡರಿಸಿ ಇವರ ಮೇಲೆ ಬಿದ್ದಿದೆ.

ಅದನ್ನು ತಪ್ಪಿಸಲು ಹೋದಾಗ ಬೈಕ್ ನಿಯಂತ್ರಣ ತಪ್ಪಿದ್ದರಿಂದ ಅಪಘಾತ ನಡೆದಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಂಚಾರಿ ಪೊಲೀಸರು ತಿಳಿಸಿದರು. ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಸಂಗಮೇಶ, ಸಿಬ್ಬಂದಿಯಾದ ಮೋಹನ ಅವರು ಭೇಟಿ ನೀಡಿ ಪರಿಶೀಲಿಸಿ, ಮೃತ ದೇಹಗಳನ್ನು ನಗರದ ಕೆಎಂಸಿಆರ್ ಐ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !